ಡಂಬ್ರಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ರಾಬಕೊವಿ ನಿರ್ದೇಶಕ ಕೃಷ್ಣರೆಡ್ಡಿ ಗಲಬಿ, ಪ್ರಮುಖರಾದ ಯಲ್ಲನಗೌಡ್ರು ಗುಡ್ಲಾನೂರು, ಕೇಶವರೆಡ್ಡಿ, ಗಾಳೆಪ್ಪ ಪೂಜಾರ ಇತರರಿದ್ದರು. 
ಕೊಪ್ಪಳ

ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಒತ್ತು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭರವಸೆ
  • ಅಳವಂಡಿ ಡಂಬ್ರಳ್ಳಿ ಕಾಮಗಾರಿ ಭೂಮಿಪೂಜೆ
ಅಳವಂಡಿ: ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಸಮೀಪದ ಡಂಬ್ರಳ್ಳಿ ಗ್ರಾಮದಲ್ಲಿ 1ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ವರ್ಷ 180 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೆವು. ಕೆಲವು ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ರಸ್ತೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿಯೂ ರಸ್ತೆಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಎಲ್ಲ ರಸ್ತೆಗಳನ್ನು ಈ ವರ್ಷದಲ್ಲಿಯೇ ಅಭಿವೃದ್ಧಿ ಪಡಿಸಲು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಮುಖರಾದ ನಿಂಗಪ್ಪ ಯತ್ನಟ್ಟಿ, ರಾಮನಗೌಡ, ಶಂಕ್ರಪ್ಪ, ಬಸುರೆಡ್ಡಿ, ದೇವರೆಡ್ಡಿ ಮಾಟ್ರ, ಯಂಕಪ್ಪ ಮಡಿವಾಳ, ಅಶೋಕ ಹರಿಜನ, ಪ್ರಶಾಂತ ನಾಯಕ ಇತರರಿದ್ದರು.