ಶ್ರೀರಾಮನಗರದ ಗ್ರಾಪಂ ಕಚೇರಿ ಆವರಣದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕಣ್ಣು ತಪಾಸಣೆ ಉಚಿತ ಶಿಬಿರದಲ್ಲಿ ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ಘಟಕದ ಸಿಬ್ಬಂದಿ ರೋಗಿಗಳ ಕಣ್ಣುಗಳ ಪರೀಕ್ಷೆ ಮಾಡಿತು. ನೇತ್ರ ಘಟಕದ ಪ್ರತಿನಿಧಿಗಳಾದ ಎಚ್.ಶರಣಪ್ಪ, ವೆಂಕಟೇಶ ಸೂಜಿ, ರಂಜಿತ್ ಕುಮಾರ ಇತರರಿದ್ದರು.
- ಪಿಡಿಒ ನಾಗೇಶ ಕುರ್ಡಿ ಸಲಹೆ
- ಗಂಗಾವತಿ ಶ್ರೀರಾಮನಗರ ಕಣ್ಣು ತಪಾಸಣೆ ಶಿಬಿರ
ಗಂಗಾವತಿ: ಶ್ರೀರಾಮನಗರದ ಗ್ರಾಪಂ ಕಚೇರಿ ಆವರಣದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಕಣ್ಣು ತಪಾಸಣೆ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ತಪಾಸಣೆಗೆ ಚಾಲನೆ ನೀಡಿದ ಗ್ರಾಪಂ ಪಿಡಿಒ ನಾಗೇಶ ಕುರ್ಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಉಚಿತ ಶಿಬಿರಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದ್ದು, ಆರೋಗ್ಯ ಕಾಳಜಿಗೆ ಒತ್ತು ನೀಡಲು ಸಲಹೆ ನೀಡಿದರು.
ಪುನೀತ್ ರಾಜಕುಮಾರ ೌಂಡೇಷನ್ ಮತ್ತು ಅಭಿಮಾನಿ ಬಳಗ, ಡಾ.ಎಂ.ಎಂ.ಜೋಶಿ ನೇತ್ರ ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರ ಕಣ್ಣು ತಪಾಸಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಲಾಯಿತು. 20 ಜನರಿಗೆ ಕನ್ನಡಕ ಮತ್ತು ಔಷಧ ಉಚಿತವಾಗಿ ವಿತರಿಸಲಾಯಿತು. ಶಸ ಚಿಕಿತ್ಸೆ ಅಗತ್ಯವಿದ್ದವರಿಗೆ ಹುಬ್ಬಳ್ಳಿಯ ಎಂ.ಎಂ.ಜೋಶಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ನೇತ್ರ ಘಟಕದ ಪ್ರತಿನಿಧಿಗಳಾದ ಎಚ್.ಶರಣಪ್ಪ, ವೆಂಕಟೇಶ ಸೂಜಿ, ರಂಜಿತ್ ಕುಮಾರ, ಸಂಸ್ಥೆ ಅಧ್ಯಕ್ಷ ಜಿ.ರಾಮಕೃಷ್ಣ ಇತರರಿದ್ದರು.