ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ತರಲಕಟ್ಟಿ ಹಿರೇಮಠದ ಗವಿಸಿದ್ದಯ್ಯ ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ಗೊಂದಿ, ಸಾಮಾಜಿಕ ಹೋರಾಟಗಾರ ಶ್ರೀಕಾಂತಗೌಡ ಮಾ.ಪಾ, ಪ್ರಮುಖರಾದ ಸುರೇಶ ಬಡಗಿ, ಶಿವು ಬ್ಯಾಳಿ, ವಿನೋದ ಬ್ಯಾಳಿ, ಯಮನೂರಪ್ಪ ಬೆನಕನಾಳ, ಕಟ್ಟೆಪ್ಪ ತಳವಾರ, ಅಕ್ಷಯ ಹಗೆದಾಳ ಇತರರಿದ್ದರು. 
ಕೊಪ್ಪಳ

ರಾಮಾಯಣದ ಅಂಶಗಳು ಭವಿಷ್ಯಕ್ಕೆ ದಾರಿದೀಪ

ಗಾಯತ್ರಿ ಮಾಲಿಪಾಟೀಲ್

ರಾಮಾಯಣದ ಅಂಶಗಳು ಭವಿಷ್ಯಕ್ಕೆ ದಾರಿದೀಪ

ವಿಜಯವಾಣಿ ಸುದ್ದಿಜಾಲ ಯಲಬುರ್ಗಾ
ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಅಂಶಗಳು ಭವಿಷ್ಯಕ್ಕೆ ದಾರಿದೀಪವಾಗಿವೆ. ಆದಿಕವಿ ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ತರಲಕಟ್ಟಿ ಹಿರೇಮಠದ ಗವಿಸಿದ್ದಯ್ಯ ಸ್ವಾಮಿ ಹೇಳಿದರು.
ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮಾಯಣ ಮಹಾಕಾವ್ಯ ಮಹರ್ಷಿಯ ಕವಿತ್ವ ಭಾವದ ಕೊಡುಗೆಯಾಗಿದೆ. ಭ್ರಾತೃತ್ವ, ರಾಜನೀತಿ, ಮನೋಧರ್ಮ, ಮಾನವೀಯ ಮೌಲ್ಯ, ಪ್ರಜಾಪ್ರಭುತ್ವವನ್ನು ರಾಮಾಯಣ ಪರಿಚಯಿಸಿದೆ ಎಂದರು. ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ಪೂಜೆ ಸಲ್ಲಿಸಿ ಅನ್ನು ಸಂತರ್ಪಣೆ ನಡೆಯಿತು. ವಾಲ್ಮೀಕಿ ಹಾಗೂ ಕನ್ನಡಾಂಬೆ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ಗೊಂದಿ, ಸಾಮಾಜಿಕ ಹೋರಾಟಗಾರ ಶ್ರೀಕಾಂತಗೌಡ ಮಾ.ಪಾ, ಪ್ರಮುಖರಾದ ಫಕೀರಗೌಡ ಮಾ.ಪಾ, ಲಕ್ಷ್ಮಣಗೌಡ ಮಾ.ಪಾ, ರಮೇಶ ಮಾ.ಪಾ, ಹನುಮಂತಪ್ಪ ಮಡಿವಾಳರ, ಗೋಪರೇಪ್ಪ ಲಮಾಣಿ, ಹನುಮಗೌಡ ಮಾ.ಪಾ, ಕರಿಯಪ್ಪ ನಂದಿಹಾಳ, ಭೀಮೇಶ ತಳವಾರ, ಮಂಜುನಾಥ ಬ್ಯಾಳಿ, ಯಮನೂರಪ್ಪ ಚಿತವಾಡ್ಗಿ, ಶೇಖರಗೌಡ ಮಾ.ಪಾ, ಹನುಮಂತಪ್ಪ ಬಡಗಿ ಇತರರಿದ್ದರು.