ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ದೇಶದ ಪ್ರಥಮ ಮಹಿಳಾ ಶಿಕ್ಷಕಿಯರಾದ ಸಾವಿತ್ರಿಬಾಯಿ ಫುಲೆ ಮತ್ತು ಾತೀಮಾ ಶೇಖ್ ಜಯಂತಿ ಕಾರ್ಯಕ್ರಮವನ್ನು ಪರಿಷತ್ತು ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಉದ್ಘಾಟಿಸಿದರು. ಕೆಪಿಸಿಸಿ ಡಿಜಿಟಲ್ ವಿಭಾಗದ ವಕ್ತಾರೆ ಎಚ್.ಎಂ.ಶೈಲಜಾ, ಡಿಡಿಪಿಐ ಸೋಮಶೇಖಗೌಡ ಇತರರಿದ್ದರು.
ಸಂವಿಧಾನದ ಆಶಯ ಅನುಷ್ಟಾನಕ್ಕಾಗಿ ಶ್ರಮ
ಗಂಗಾವತಿ: ಶೋಷಿತ, ಅವಕಾಶ ವಂಚಿತ ಸಾಹಿತ್ಯ ಕೃಷಿಕರಿಗಾಗಿ ಮತ್ತು ಸಂವಿಧಾನದ ಆಶಯ ಅನುಷ್ಟಾನಕ್ಕಾಗಿ ದಲಿತ ಪರಿಷತ್ತು ಕಾರ್ಯ ನಿರ್ವಹಿಸುತ್ತಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.
ನಗರದ ಐಎಂಎ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ದೇಶದ ಪ್ರಥಮ ಮಹಿಳಾ ಶಿಕ್ಷಕಿಯರಾದ ಸಾವಿತ್ರಿಬಾಯಿ ಫುಲೆ ಮತ್ತು ಾತೀಮಾ ಶೇಖ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಲಾಯಿತು.
ಕೆಪಿಸಿಸಿ ಡಿಜಿಟಲ್ ವಿಭಾಗದ ವಕ್ತಾರೆ ಎಚ್.ಎಂ.ಶೈಲಜಾ, ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಳ್ಳಿ, ತಾಲೂಕಾಧ್ಯಕ್ಷ ಛತ್ರಪ್ಪ ತಂಬೂರಿ, ವಿವಿಧ ಅಕಾಡೆಮಿ ಸದಸ್ಯರಾದ ರಮೇಶ ಗಬ್ಬೂರು, ಕೆ.ನಿಂಗಜ್ಜ, ಡಾ.ಜಾಜಿ ದೇವೇಂದ್ರಪ್ಪ, ಡಾ.ಶರಣಬಸಪ್ಪ ಕೋಲ್ಕಾರ್, ಅಜಮೀರ್ ನಂದಾಪೂರ, ಡಿಡಿಪಿಐ ಸೋಮಶೇಖರಗೌಡ, ಬಿಇಒ ಎಚ್.ಎಸ್.ನಟೇಶ, ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ, ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ್ ಇತರರಿದ್ದರು.