ಬೆಟಿಗೇರಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ದಾಖಲಾತಿ ಆಂದೋಲನ ನಡೆಯಿತು. ಮುಖ್ಯ ಶಿಕ್ಷಕ ಪರಶುರಾಮ ಪಲ್ಲೆದ, ಶಿಕ್ಷಕರಾದ ಗಂಗಪ್ಪ ಅಂಬಿಗೇರ, ಕಸ್ತೂರಿ ಬಡಿಗೇರ, ಸವಿತಾ, ಹುಸೇನಸಾಬ ಹಳೆಮನಿ, ಸವಿತಾ ಸಾಲ್ಮನಿ, ಮಲ್ಲಮ್ಮ, ಭಾರ್ಗವ, ವಿದ್ಯಾಶ್ರೀ, ಶ್ರೀಕಾಂತ ಬಾವಿ ಇತರರಿದ್ದರು. 
ಕೊಪ್ಪಳ

ಸರ್ಕಾರ-ಸಮುದಾಯ ಸಹಕಾರದಿಂದ ಶೈಕ್ಷಣಿಕ ಪ್ರಗತಿ

ಶಾಮಸುಂದರ್ ಕೊಪ್ಪಳಕರ್
ಅಳವಂಡಿ: ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ
ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ನಾಗರಡ್ಡಿ ತಿಳಿಸಿದರು.
ಸಮೀಪದ ಬೆಟಿಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಸಹಕಾರ ಬಹಳ ಮುಖ್ಯ. ಮಕ್ಕಳು ಶಾಲೆಗೆ ನಿತ್ಯ ಹಾಜರಾಗುವಂತೆ ನೋಡುವ ಜತೆಗೆ ಆಗಾಗ ಶಾಲೆಗೆ ಭೇಟಿ ನೀಡಿ ಅವರ ಶೈಕ್ಷಣಿಕ ಪ್ರಗತಿ ಬಗ್ಗೆ ವಿಚಾರಿಸಬೇಕು. ಸಮುದಾಯ, ಸರ್ಕಾರ ಹಾಗೂ ಪಾಲಕರ ಸಹಕಾರದಿಂದ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದರು.
ಆಂದೋಲನ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಶಾಲಾ ವಿದ್ಯಾರ್ಥಿನಿಯರ ಕುಂಭ ಹಾಗೂ ವಾದ್ಯ ಮೇಳದೊಂದಿಗೆ ನಡೆದ ಭವ್ಯ ಮೆರವಣಿಗೆ ಗ್ರಾಮಸ್ಥರ ಗಮನ ಸೆಳೆಯಿತು.
ಅಳವಂಡಿಯ ಸಿಪಿಎಸ್ ಹಾಗೂ ಜಿಪಿಎಸ್ ಶಾಲೆಯ ಮಕ್ಕಳಿಗೆ ದಾನಿ ಹೇಮರಡ್ಡಿ, ಸಂಜೀವರಡ್ಡಿ ಅವರು ನೀಡಿದ ಉಚಿತ ನೋಟ್‌ಬುಕ್‌ಗಳನ್ನು ಗುರುವಾರ ವಿತರಿಸಲಾಯಿತು. ಸಿಆರ್‌ಪಿ ವಿಜಯಕುಮಾರ ಟಿಕಾರೆ, ಗ್ರಾಪಂ ಮಾಜಿ ಸದಸ್ಯ ಗುರುಬಸವರಾಜ ಹಳ್ಳಿಕೇರಿ, ಪ್ರಮುಖರಾದ ಮಲ್ಲಪ್ಪ ಬೆಣಕಲ್, ಶರಣಪ್ಪ, ಆನಂದ ಮುತ್ತಾಳ, ರಾಮರಡ್ಡಿ ಇತರರಿದ್ದರು.