ಕನಕಗಿರಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾಹಬ್ಬ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಛದ್ಮವೇಷ ಗಮನ ಸೆಳೆಯಿತು. ಮುಖ್ಯಶಿಕ್ಷಕ ಸಂಗಮೇಶ, ಶಿಕ್ಷಕರಾದ ಮಲ್ಲಿಕಾರ್ಜುನ ಕುಷ್ಟಗಿ, ಮಲ್ಲಿಕಾರ್ಜುನ ಸಿರಿಗೇರಿ, ಧನುಂಜಯ ಇತರರಿದ್ದರು. 
ಕೊಪ್ಪಳ

ಮಕ್ಕಳನ್ನು ಪ್ರೋತ್ಸಾಹಿಸಲು ಕಲಿಕಾಹಬ್ಬ ಪೂರಕ

ಪ್ರಮುಖ ಮುಖ್ಯಾಂಶಗಳು

  • ಕಲಿಕಾಹಬ್ಬ

ಮಕ್ಕಳನ್ನು ಪ್ರೋತ್ಸಾಹಿಸಲು ಕಲಿಕಾಹಬ್ಬ ಪೂರಕ

ಕನಕಗಿರಿ: ಒಂದರಿಂದ ಐದನೇ ತರಗತಿಯ ಎಫ್‌ಎಲ್‌ಎನ್ ಮಕ್ಕಳಿಗೆ ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಇಲಾಖೆ ಕಲಿಕಾಹಬ್ಬ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಸಿಆರ್‌ಪಿ ರಾಜೀವ್ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ (ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಕಲಿಕಾಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
2020ರ ಎನ್‌ಇಪಿ ನಿಯಮದಡಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಎಂಬ ಪರಿಕಲ್ಪನೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥಸ್ವಾಮಿ ಚೂಡಾಮಣಿ, ಸದಸ್ಯರಾದ ಹನುಮಂತರೆಡ್ಡಿ ಮಹಲಿನಮನಿ, ಮುಖ್ಯಶಿಕ್ಷಕ ಸಂಗಮೇಶ ಹಿರೇಮಠ, ಸನೌಸಂ ತಾಲೂಕು ಅಧ್ಯಕ್ಷೆ ಶಂಶಾದ್ ಬೇಗಂ, ಕಾರ್ಯದರ್ಶಿ ಉಮೇಶ ಇತರರಿದ್ದರು.