ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಆಯೋಗ ಅಧ್ಯೆ ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಹಾಗೂ ವಿದ್ಯಾರ್ಥಿಗಳಿದ್ದರು.  
ಕೊಪ್ಪಳ

ಯಶಸ್ವಿ ಬದುಕಿಗೆ ಶಿಕ್ಷಣ ಮಾರ್ಗದರ್ಶಿ

ಪ್ರಮುಖ ಮುಖ್ಯಾಂಶಗಳು

  • ನಾಗಲಕ್ಷ್ಮೀ ಚೌಧರಿ ಅಭಿಮತ
  • ವಿದ್ಯಾರ್ಥಿನಿಯರೊಂದಿಗೆ ಸಂವಾದ
ಕೊಪ್ಪಳ: ಅರಿವೇ ಬದುಕು. ಅಜ್ಞಾನವೇ ಸಾವು. ಶಿಕ್ಷಣದಿಂದ ಮಾತ್ರ ಪ್ರಪಂಚ ಜ್ಞಾನ ಬೆಳೆಯುತ್ತದೆ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣವನ್ನು ಶಕ್ತಿಯಾಗಿ ಬಳಸಿಕೊಂಡು ಬೆಳೆಯಬಹುದು. ಮಹಿಳೆಯರು ಸುಶಿತರಾಗಬೇಕು. ನಮ್ಮ ಹಕ್ಕು, ಕರ್ತವ್ಯದ ಬಗ್ಗೆ ಅರಿಯಲು ಶಿಕ್ಷಣ ಅವಶ್ಯ. ಓದುವ ವಯಸ್ಸಿನಲ್ಲಿ ಅನಗತ್ಯ ಆಕರ್ಷಣೆ, ಆಮಿಷಕ್ಕೆ ಒಳಗಾಗಬೇಡಿ. ಯಶಸ್ಸಿಗೆ ಅಡ್ಡದಾರಿಗಳಿಲ್ಲ. ನಿರಂತರ ಶ್ರಮ, ಶ್ರದ್ಧೆ ಬೇಕು. ಇಂದು ಎಲ್ಲ ವಯೋಮಾನದವರು ಸಾಮಾಜಿಕ ಜಾಲತಾಣಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಮಹಿಳೆಯರು ಭಾವನಾತ್ಮಕ ಜೀವಿಗಳು. ಅದನ್ನು ದುರುಪಯೋಗಪಡಿಸಿಕೊಳ್ಳುವ ದುರುಳರು ಅಮಾಯಕ ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ನಂಬಿಸಿ ಮೋಸ ಮಾಡುತ್ತಾರೆ. ಬ್ಲಾಕ್​ ಮೇಲ್​ ಮಾಡುತ್ತಾರೆ. ಬೇಸತ್ತ ಮಹಿಳೆಯರು, ಹುಡುಗಿಯರು ಜೀವ ಕಳೆದುಕೊಳ್ಳುತ್ತಿದ್ದಾರೆ. ಎಚ್ಚರಿಕೆಯಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಸಿ. ಅಪರಿಚಿತರ ಸ್ನೇಹ, ಪ್ರೇಮದ ಪ್ರಸ್ತಾಪ ಒಪ್ಪಿಕೊಳ್ಳಬೇಡಿ. ಅನಗತ್ಯ ಸಂಪರ್ಕ ಬೇಡ ಎಂದು ಎಚ್ಚರಿಸಿದರು.
ಸಂವಿಧಾನ ನೀಡಿದ ಹಕ್ಕುಗಳನ್ನು ಸರಿಯಾಗಿ ಬಳಿಸಿಕೊಳ್ಳುವ ಜ್ಞಾನ ನಮಗಿಲ್ಲ. ಎಲ್ಲರೂ ಸಂವಿಧಾನ ಅರಿಯಿರಿ. ನಿಮ್ಮ ಹಕ್ಕುಗಳನ್ನು ಅನುಭವಿಸಿ. ಅವುಗಳಿಗಾಗಿ ಹೋರಾಡಿ. ಅನ್ಯಾಯವಾದಾಗ ಪ್ರತಿಭಟಿಸಿ. ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ. ಸಂಬಂಧಿಸಿದ ಇಲಾಖೆ ಸಂಪರ್ಕಿಸಿ. ಲಾನುಭವಿಗಳು ಸದ್ಬಳಕೆ ಮಾಡಿಕೊಂಡಾಗಲೇ ಯೋಜನೆಗಳು ಯಶ ಕಾಣಲು ಸಾಧ್ಯ. ನಮ್ಮ ಊರು, ಜಿಲ್ಲೆ, ರಾಜ್ಯ, ದೇಶದ ಬಗ್ಗೆ ಕನಿಷ್ಠ ಜ್ಞಾನವಾದರೂ ಇರಬೇಕು. ಸರ್ಕಾರಿ ವ್ಯವಸ್ಥೆ ಕಾರ್ಯನಿರ್ವಹಣೆ ಬಗ್ಗೆ ತಿಳಿಯಿರಿ ಎಂದು ಸಲಹೆ ನೀಡಿದರು.
ವಿವಿಧ ವಿದ್ಯಾರ್ಥಿನಿಯರು ತಮ್ಮ ಗ್ರಾಮ, ಕಾಲೇಜುಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡರು. ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅಧ್ಯೆ ಸೂಚಿಸಿದರು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ.ಶೆಟ್ಟೆಪ್ಪನವರ, ಡಿಡಿಪಿಯು ಜಗದೀಶ ಜಿ.ಎಚ್​., ಇತರರಿದ್ದರು.