ಅಳವಂಡಿ ಸಮೀಪದ ಬೈರಾಪುರದಲ್ಲಿ ಅನಿಮಿಯಾ ತಪಾಸಣಾ ಶಿಬಿರ ನಡೆಯಿತು. ಶ್ರೀ ರಾಧಾಕೃಷ್ಣನ್ ಸಂಸ್ಥೆಯ ಅಧ್ಯಕ್ಷ ಶರಣಪ್ಪ ಸಿಂದೋಗಿ, ಪ್ರಮುಖರಾದ ಎಂ.ಎಲ್.ಜೋಶಿ, ದೇವಪ್ಪ ಕಟ್ಟಿಮನಿ, ಆನಂದ ಕುಲಕರ್ಣಿ, ಮೋಹನಭಟ್ ಜೋಶಿ, ರಮೇಶ, ವೆಂಕಟೇಶ ಬ್ಯಾಡಗಿ, ಮಹಾಂತಯ್ಯ, ಮುತ್ತುರಾಜ, ಪ್ರಶಾಂತ, ಯಶವಂತ, ರವಿ ಇತರರು ಇದ್ದರು.
- ಶರಣಪ್ಪ ಸಿಂದೋಗಿ ಸಲಹೆ
- ಅಳವಂಡಿ ಬೈರಾಪುರ ಅನಿಮಿಯಾ ತಪಾಸಣಾ ಶಿಬಿರ
ಅಳವಂಡಿ: ಪಾಲಾಕ್ ಸೊಪ್ಪು, ನುಗ್ಗೆಕಾಯಿ, ಧಾನ್ಯಗಳು, ಒಣದ್ರಾಕ್ಷಿ, ರಾಗಿ, ಬೆಲ್ಲ, ಬೇಳೆಕಾಳಿನಂತಹ ಕಬ್ಬಿಣಾಂಶವಿರುವ ಆಹಾರ ಸೇವಿಸುವುದರಿಂದ ಅನಿಮಿಯಾ ತಡೆಗಟ್ಟಬಹುದು ಎಂದು ಶ್ರೀ ರಾಧಾಕೃಷ್ಣನ್ ಸಂಸ್ಥೆಯ ಅಧ್ಯಕ್ಷ ಶರಣಪ್ಪ ಸಿಂದೋಗಿ ತಿಳಿಸಿದರು.
ಸಮೀಪದ ಬೈರಾಪುರದಲ್ಲಿ ಗುಜರಾತ್‌ನ ಶ್ರೀಮದ್ ರಾಜಚಂದ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸ್ಪಂದನಾ ಸೇವಾ ಸಂಸ್ಥೆ ವಿಜಯಪುರ, ಆರೋಗ್ಯ ಭಾರತಿ ಹಾಗೂ ಶ್ರೀ ರಾಧಾಕೃಷ್ಣನ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅನಿಮಿಯಾ (ರಕ್ತಹೀನತೆ) ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಅನಿಮಿಯಾದಿಂದ ರಕ್ತದಲ್ಲಿನ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ದೇಹದ ಅಂಗಾಂಶಗಳಿಗೆ ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ದಣಿವು, ಸುಸ್ತು, ಉಸಿರಾಟ ತೊಂದರೆಗೆ ಕಾರಣವಾಗುತ್ತದೆ. ದೇಹಕ್ಕೆ ಕಬ್ಬಿಣಾಂಶ ಕೊರತೆಯು ಪ್ರಮುಖ ಕಾರಣವಾಗಿದ್ದು, ಪೌಷ್ಟಿಕ ಆಹಾರ ಸೇವನೆ ಮತ್ತು ವೈದ್ಯಕೀಯ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಎಂದರು.