ಕುಷ್ಟಗಿ ತಾಲೂಕಿನ ಗುಮಗೇರಾದಲ್ಲಿ ಶ್ರೀ ದುರ್ಗಾದೇವಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. 
ಕೊಪ್ಪಳ

ದುರ್ಗಾದೇವಿ ರಥೋತ್ಸವ ಅದ್ದೂರಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ರಥೋತ್ಸವ

ದುರ್ಗಾದೇವಿ ರಥೋತ್ಸವ ಅದ್ದೂರಿ

ಕುಷ್ಟಗಿ: ತಾಲೂಕಿನ ಗುಮಗೇರಾ ಆರಾಧ್ಯ ದೇವತೆ ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ತ ಶುಕ್ರವಾರ ಸಂಜೆ ಸಂಭ್ರಮದಿಂದ ಮಹಾರಥೋತ್ಸವ ಜರುಗಿತು.
ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಕಾರ್ಣಿಕ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸಾವಿರಾರು ಭಕ್ತರ ನಡುವೆ ರಥೋತ್ಸವ ಜರುಗಿತು.
ಸುತ್ತಲಿನ ನಾಗರಾಳ, ಕಂದಕೂರು, ಹಿರೇಮನ್ನಾಪೂರು, ಎಂ.ಗುಡದೂರು, ಶಾಖಾಪೂರು, ಬೋದೂರು, ಚಿಕ್ಕಮನ್ನಾಪೂರ, ನವಲಹಳ್ಳಿ, ಟೆಂಗುಂಟಿ, ಮುದೇನೂರು, ಮಾದಾಪೂರು, ಗಂಗನಾಳ ಸೇರಿ ವಿವಿಧ ಗ್ರಾಮದ ಭಕ್ತರು ಆಗಮಿಸಿದ್ದರು.