ಅಳವಂಡಿ ಸಮೀಪದ ಹಿರೇಸಿಂದೋಗಿ ಗ್ರಾಮದಲ್ಲಿ ಸುಪಾರಿ ಸರೋಜಾ ನಾಟಕ ಪ್ರದರ್ಶನಕ್ಕೆ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು. ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ, ಪ್ರಮುಖರಾದ ಖಾಜಾಹುಸೇನ್, ಶರಣಬಸವ ರಡ್ಡಿ, ನಿಂಗಪ್ಪ, ರಾಚಯ್ಯ ಸ್ವಾಮಿ, ನೂರುದ್ದೀನ್ ಇತರರಿದ್ದರು. 
ಕೊಪ್ಪಳ

ನಾಟಕಗಳು ಬದುಕಿಗೆ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ನಾಟಕ
  • ನಾಟಕ ಪ್ರದರ್ಶನ
  • ‘ಸುಪಾರಿ ಸರೋಜಾ’

ನಾಟಕಗಳು ಬದುಕಿಗೆ ದಾರಿದೀಪ

ಅಳವಂಡಿ: ನಾಟಕಗಳು ಬದುಕಿಗೆ ದಾರಿದೀಪವಾಗಿವೆ. ಜತೆಗೆ ಸನ್ಮಾರ್ಗದೆಡೆಗೆ ಸಾಗಲು ಸಹಕಾರಿಯಾಗಿವೆ ಎಂದು ಮೈನಹಳ್ಳಿ ಬಿಕನಹಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಸಮೀಪದ ಹಿರೇಸಿಂದೋಗಿ ಗ್ರಾಮದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಸುಪಾರಿ ಸರೋಜಾ’ ಎಂಬ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಟಕದಲ್ಲಿ ಬರುವ ಉತ್ತಮ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು. ರಂಗಭೂಮಿಗೆ ಎಲ್ಲರ ಪ್ರೋತ್ಸಾಹ ಅಗತ್ಯ. ಸರ್ಕಾರವೂ ಸಹಾಯ ಹಸ್ತ ನೀಡಬೇಕು ಎಂದರು.
ಮುಖಂಡ ಖಾಜಾ ಹುಸೇನ್ ದೊಡ್ಡಮನಿ ಹೊಸಳ್ಳಿ ಮಾತನಾಡಿ, ನಾಟಕಗಳಿಂದ ಜನರಿಗೆ ಮನರಂಜನೆ ಜತೆಗೆ ಸಮಾಜ ಪರಿವರ್ತನೆ ಸಾಧ್ಯವಿದೆ. ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.