ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಅಭಿನವ ಗವಿಶ್ರೀ ನಾಟ್ಯ ಸಂಘದಿಂದ ‘ತಾಯಿಯ ಮಡಿಲು’ ನಾಟಕ ಪ್ರದರ್ಶನಕ್ಕೆ ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಚಾಲನೆ ನೀಡಿದರು. ಮಾಜಿ ಸೈನಿಕ ಶಂಕ್ರಪ್ಪ ಮೆಣಸಿಗೇರಿ, ನಟ ತಿರುಪತಿ ರಾಠೋಡ, ಮುಖ್ಯ ಶಿಕ್ಷಕ ಬಸವರಾಜ ಮಾಸ್ತಿ, ಸುರೇಶ ವೇದಪಾಠಕ, ಶರಣಪ್ಪ ಚನ್ಯಾಳ, ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಇತರರಿದ್ದರು.
- ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಅಭಿಪ್ರಾಯ
ಯಲಬುರ್ಗಾ: ತಂದೆ-ತಾಯಿ ಜನ್ಮ ನೀಡಿದರೇ, ಗುರು ಜೀವನ ರೂಪಿಸುವ ದಾರಿ ದೀಪವಾಗಿದ್ದಾರೆ. ಅಂತಹ ಗುರುಗಳ ಋಣ ತೀರಿಸಲು ಎಂದಿಗೂ ಸಾಧ್ಯವಾಗದು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಅಭಿಪ್ರಾಯಪಟ್ಟರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ವೀರಭದ್ರಪ್ಪ ಎಸ್. ಬೆಣಕಲ್ ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಸಮಾರಂಭ ಹಾಗೂ ವಜ್ರಬಂಡಿಯ ಅಭಿನವ ಗವಿಶ್ರೀ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ‘ತಾಯಿಯ ಮಡಿಲು’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಇತ್ತೀಚೆಗೆ ಮಾತನಾಡಿದರು. ಶಿಷ್ಯರು ಉನ್ನತ ಹುದ್ದೆಯಲ್ಲಿರಬೇಕೆಂದು ಗುರು ಮಹಾದಾಸೆ ಹೊಂದಿರುತ್ತಾರೆ. ಎಲ್ಲ ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾಭ್ಯಾಸ ಮಾಡುವ ಮೂಲಕ ಗುರುವಿನ ಆಸೆ ಈಡೇರಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಮುಖ್ಯ ಶಿಕ್ಷಕರಾದ ವಿ.ಎಸ್.ಬೆಣಕಲ್ ತಮ್ಮ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ, ಅಪಾರ ಶಿಷ್ಯರನ್ನು ಸಂಪಾದಿಸಿರುವುದು ಶ್ಲಾಘನೀಯ ಎಂದರು.
ಶರಣಯ್ಯ ಶಾಸ್ತ್ರಿಮಠ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ವಿ.ಎಸ್.ಬೆಣಕಲ್ ಅಧ್ಯಕ್ಷತೆ ವಹಿಸಿದ್ದರು. ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ್, ಉಪನ್ಯಾಸಕ ಡಾ.ಮಹಾಂತೇಶ ನೆಲಾಗಣಿ ಮಾತನಾಡಿದರು. ಮಾಜಿ ಸೈನಿಕ ಶಂಕ್ರಪ್ಪ ಮೆಣಸಿಗೇರಿ, ನಟ ತಿರುಪತಿ ರಾಠೋಡ, ಮುಖ್ಯಶಿಕ್ಷಕ ಬಸವರಾಜ ಮಾಸ್ತಿ, ಸುರೇಶ ವೇದಪಾಠಕ, ಶರಣಪ್ಪ ಚನ್ಯಾಳ, ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಸೇರಿ ಇತರರಿದ್ದರು.