ಮೈನಳ್ಳಿಯಲ್ಲಿ ಶ್ರೀ ಗುರುಬಸವರಾಜೇಶ್ವರ ನಾಟ್ಯ ಸಂಘದ ನಾಟಕ ಪ್ರದರ್ಶನದಲ್ಲಿ ನಾಟಕ ಪುಸ್ತಕ ಬಿಡುಗಡೆಗೊಳಿಸಲಾಯಿತು. ಪ್ರಮುಖರಾದ ಮಹಾಂತೇಶಗೌಡ, ಶ್ರೀಧರ, ಡಾ.ಷಣ್ಮುಖಯ್ಯ, ಮಲ್ಲಿಕಾರ್ಜನ ಹಳ್ಳಿ, ಜಗದೀಶ ಬಾಸಿಂಗದಾರ, ಗುರುರಾಜ ಮೂಲಿಮನಿ, ತಿಪ್ಪಣ್ಣ ಹೂಗಾರ ಇತರರಿದ್ದರು.
- ಸಾಹಿತಿ ಡಾ.ಷಣ್ಮುಖಯ್ಯ ತೋಟದ ಅನಿಸಿಕೆ
- ಕೂಡಿ ಬಂತು ಕಂಕಣ ಬಲ ನಾಟಕ ಪ್ರದರ್ಶನ, ನಾಟಕ ಪುಸ್ತಕ ಬಿಡುಗಡೆ
ಅಳವಂಡಿ: ಪ್ರಸ್ತುತ ದಿನಗಳಲ್ಲಿ ಏಕಾಂಗಿ, ಒತ್ತಡದ ಜೀವನ ನಡೆಸುತ್ತಿರುವವರಿಗೆ ಸಂಗೀತ, ರಂಗಭೂಮಿ ಸಹಕಾರಿಯಾಗಬಲ್ಲದು ಎಂದು ಸಾಹಿತಿ ಡಾ.ಷಣ್ಮುಖಯ್ಯ ತೋಟದ ಅಭಿಪ್ರಾಯಪಟ್ಟರು.
ಸಮೀಪದ ಮೈನಳ್ಳಿ ಶ್ರೀ ಗುರುಬಸವರಾಜೇಶ್ವರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ಕೂಡಿ ಬಂತು ಕಂಕಣ ಬಲ ನಾಟಕ ಹಾಗೂ ನಾಟಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಯುವಜನತೆ ಕಲೆ, ಸಾಂಸ್ಕೃತಿಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಹಿರಿಯ ಕಲಾವಿದರು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಸಾಧಕರು, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ ಮೈನಹಳ್ಳಿ, ಪ್ರಮುಖರಾದ ಶ್ರೀಧರ ಕುರಡಿಗಿ, ಶಂಕ್ರಯ್ಯ ಕಾಟ್ರಳ್ಳಿ, ಬನ್ನಪ್ಪ ಕತ್ತಿ, ಮಲ್ಲಪ್ಪ ಗುಡದಣ್ಣವರ, ಮಂಜುನಾಥ ಬಾಸಿಂಗದಾರ, ಸುಧೀರಬಾಬು, ವಿರೂಪಾಕ್ಷಯ್ಯ ತೋಟದ, ಕೊಟ್ರೇಶ ಬಳಗೇರಿ, ಈಶಪ್ಪ ಮಾಸ್ತರ ಓಜನಹಳ್ಳಿ, ಉದಯ ತೋಟದ, ಅಭಿಷೇಕ ಇದ್ದರು.