ಕೊಪ್ಪಳದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಹದಿಹರೆಯದ ಹೆಣ್ಣುಮಕ್ಕಳ ಸವಾವೇಶವನ್ನು ನ್ಯಾಯಾಧೀಶ ಮಹಾಂತೇಶ ಎಸ್. ದರಗದ್ ಉದ್ಘಾಟಿಸಿದರು. ಎಎಸ್ಪಿ ಆರ್. ಹೇಮಂತ್ ಕುಮಾರ್, ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಡಿ.ಎಸ್. ಆಂಜನೇಯ ಇತರರಿದ್ದರು.
ವಿದ್ಯಾರ್ಥಿಗಳು ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಂದೆ-ತಾಯಿಗೆ ಗೌರವಿಸುವುದರ ಜತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ್ ಹೇಳಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ, ಪೋಕ್ಸೋ, ಸೈಬರ್ ಕ್ರೈಂ, ವಾದಕ ದ್ರವ್ಯಮುಕ್ತ ಸವಾಜ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತ ಹದಿಹರೆಯದ ಹೆಣ್ಣುಮಕ್ಕಳ ಸವಾವೇಶದಲ್ಲಿ ವಾತನಾಡಿದರು. ಸಾವಾಜಿಕ ಜಾಲತಾಣದ ಗೀಳಿನಿಂದ ಮಹಿಳೆಯರು ಇತ್ತೀಚೆಗೆ ನಾನಾ ತೊಂದರೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರು ಅಪಾಯ ಎನಿಸಿದಾಗ ತಕ್ಷಣ ನೆರವಿಗೆ ಬರುವ 1098 ಹಾಗೂ 112 ಸಹಾಯವಾಣಿಗಳ ಅನೂಕುಲ ಪಡೆಯಬೇಕು ಎಂದರು.
ಎಎಸ್ಪಿ ಆರ್. ಹೇಮಂತ್ ಕುವಾರ್ ವಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸೈಬರ್ ಧೋಖಾಗಳಿಗೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲಾತಾಣಗಳಿಗೆ ದಾಸರಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಮಹಿಳೆಯರು ಸೈಬರ್ ಅಪರಾಧಗಳಿಂದ ಸುರಕ್ಷಿತವಾಗಿರಬೇಕು ಹಾಗೂ ಪೋಕ್ಸೋ ಕಾಯ್ದೆಯಡಿ ಲಭ್ಯವಿರುವ ಕಾನೂನು ರಕ್ಷಣೆಗಳ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ ಎಂದರು. ಇದಕ್ಕೂ ಮುನ್ನ ಎಸ್ಪಿ ಕಚೇರಿಯಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನವರೆಗೂ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಯುನಿಸೆಫ್ ಘಟಕದ ಹರೀಶ ಜೋಗಿ, ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಡಿ.ಎಸ್.ಆಂಜನೇಯ, ರೀಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮಲ್ಲೇಶ ಜಾಧವ್, ತಾಲೂಕು ರೀಡ್ಸ್ ಸಂಸ್ಥೆ ನಿರ್ದೇಶಕ ಕೆ. ಎಂ.ತಿಪ್ಪೇಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿಯ ಪ್ರಕಾಶ್ ಶಿವಪ್ಪ ಕಡಗದ ಇತರರಿದ್ದರು.