Janardhan reddy 
ಕೊಪ್ಪಳ

ಡಿಕೆಶಿಗೆ ರಿಯಲ್​ ಎಸ್ಟೇಟ್​ ತುಂಬಾ ಇಷ್ಟ

ಪ್ರಮುಖ ಮುಖ್ಯಾಂಶಗಳು

  • ಜನಾರ್ದನ ರೆಡ್ಡಿ ಚಾಟಿ
ಕೊಪ್ಪಳ: ಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ರಿಯಲ್​ ಎಸ್ಟೇಟ್​ ಅಂದ್ರೆ ತುಂಬಾ ಇಷ್ಟ. ಅದಕ್ಕೆ ಬಿಡದಿ ಟೌನ್​ಶಿಪ್​ ಹಿಂದೆ ಬಿದ್ದಿದ್ದಾರೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದು, ಅಭಿವೃದ್ಧಿ ಬಿಟ್ಟು ಬಿಡದಿ ಹಿಂದೆ ಬಿದ್ದಿದ್ದಾರೆಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಟೀಕಿಸಿದರು.
ತಾಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂಬಂಧ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ರಾಜ್ಯದಲ್ಲಿ ಬರ ಆವರಿಸುತ್ತಿದೆ. ರಸ್ತೆಗಳು ಹಾಳಾಗಿವೆ. ಅಭಿವೃದ್ಧಿ ಮರೆಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸಿಎಂ ಈ ಬಗ್ಗೆ ಯೋಚನೆ ಮಾಡಲಿ. ಬಿಡದಿ ಜಪ ಕೈ ಬಿಡಲಿ ಎಂದರು.
ಗ್ಯಾರಂಟಿ ಪರಿಷ್ಕರಣೆ ಹೆಸರಿನಲ್ಲಿ ದಿನದೂಡುವ ಕೆಲಸವಾಗುತ್ತಿದೆ. ಈಗಾಗಲೇ ಮೂರು ತಿಂಗಳಿಂದ ಜನರಿಗೆ ಹಣ ಬಂದಿಲ್ಲ. ನೇರವಾಗಿ ಬಂದ್​ ಮಾಡುತ್ತೇವೆಂದು ಹೇಳುವ ಬದಲು ಈ ರೀತಿ ಮಾಡುತ್ತಿದ್ದಾರೆಂದು ಚಾಟಿ ಬೀಸಿದರು.
ರಾಮ ಮಂದಿರ ಟ್ರಸ್ಟ್​ ಹಣ ದುರುಪಯೋಗ ಬಗ್ಗೆ ಪ್ರತಿಕ್ರಿಯಿಸಿ, ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಭಾರತೀಯರ 500 ವರ್ಷಗಳ ಕನಸು. ಮಂದಿರ ನಿರ್ಮಿಸುವಾಗ ಆಸ್ಪತ್ರೆ, ಶಾಲೆ ಕಟ್ಟಬೇಕೆಂದು ಕಾಂಗ್ರೆಸ್​ನವರು ಹೇಳಿದರು. ಈಗ ಮಂದಿರದ ಲೆಕ್ಕ ಕೇಳುತ್ತಿದ್ದಾರೆ. ಅವರಿಗೆ ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ. ರಾಮ ಭಕ್ತರಿಗೆ ಮಾತ್ರ ಕೇಳುವ ಹಕ್ಕಿದೆ.
ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ರಾಮ ಭಕ್ತರು. ಹಣ ದುರುಪಯೋಗ ಪ್ರಕಣದಲ್ಲಿ ಈಗಾಗಲೇ ಕಾನೂನು ಕ್ರಮವಾಗಿದೆ. ಲೆಕ್ಕಪತ್ರದ ಆಡಿಟ್​ ನಡೆಯುತ್ತಿದೆ. ತಪ್ಪಾದಾಗ ಕ್ರಮ ಆಗೇ ಆಗುತ್ತದೆ. ರಾಮ ಮಂದಿರ ವಿರೋಧಿಸಿದ ಕಾಂಗ್ರೆಸ್ಸಿಗರಿಗೆ ಲೆಕ್ಕ ಕೇಳಲು ನಾಚಿಕೆ ಆಗಬೇಕೆಂದು ತಿರುಗೇಟು ನೀಡಿದರು.
"

ಮಾಜಿ ಸಿಎಂ ಸದಾನಂದಗೌಡರು ಪಕ್ಷದ ಹಿರಿಯರು. ನಿಷ್ಠಾವಂತರು. ಅವರಿಗೆ ಸಂಬಂಧಿಸಿದ್ದೆಂದು ಹೇಳುವ ಆಡಿಯೋ ಸುಳ್ಳು. ಅದನ್ನು ಅವರೇ ಹೇಳಿದ್ದಾರೆ. ಎಐ ಟೆಕ್ನಾಲಜಿ ಬಳಸಿ ಮಾಡಿರಬಹುದು.

— ಜನಾರ್ದನ ರೆಡ್ಡಿ. ಗಂಗಾವತಿ ಶಾಸಕ.