ವಿವಿದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅಂಗವಿಕಲರ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಪೂಜಾರ, ಅನ್ವರ ಪಟೇಲ್, ವಿರೇಶ ಹಾಲಗುಂಡಿ, ಅನುರಾಧ, ರಾಯನಗೌಡ, ಮಂಜುನಾಥ, ಹನುಮಾ, ಆದಪ್ಪ, ಸಿದ್ದಲಿಂಗಮ್ಮ ಇದ್ದರು.
ಕೊಪ್ಪಳ: ಮಾಸಾಶನ ಹೆಚ್ಚಳ ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅಂಗವಿಕಲರ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಲವು ವರ್ಷದಿಂದ ನಮ್ಮ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುತ್ತಿದ್ದೇವೆ. ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟಿಸಿದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ನಗರ&ಸ್ಥಳಿಯ ಸಂಸ್ಥೆಗಳಲ್ಲಿ ಶೇ.5ರಷ್ಟು ಅನುದಾನ ನಮಗಾಗಿ ಬಳಕೆ ಮಾಡುತ್ತಿಲ್ಲ. ರಾಜ್ಯಾದ್ಯಂತ ಬಸ್ ಪಾಸ್ ಸೌಲಭ್ಯವಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಮಾಸಾಶನ ಹೆಚ್ಚಳವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
21 ರೀತಿಯ ಅಂಗವಿಕಲರಿಗೆ 5ಸಾವಿರ ರೂ.ವರೆಗೆ ಮಾಸಾಶನ ಹೆಚ್ಚಿಸಿ. ಬಸ್ಪಾಸ್ ರಾಜ್ಯಾದ್ಯಂತ ವಿಸ್ತರಿಸಿ. ಗ್ರಾಪಂ ನಿಧಿಯಲ್ಲಿ ಶೇ.5ರಷ್ಟು ಅಂಗವಿಕಲರಿಗೆ ಬಳಕೆ ಮಾಡಿ. ಜಿಲ್ಲಾ, ತಾಲೂಕುಮಟ್ಟದಲ್ಲಿ ಕುಂದು&ಕೊರತೆ ಸಭೆ ನಡೆಸಿ. ಅಂಗವಿಕಲರ ಪೋಷಕರಿಗೆ ಆರೈಕೆ ಭತ್ಯೆ ನೀಡಿ. ಶಾಸಕ, ಸಂಸದರ ಅನುದಾನದಲ್ಲೂ ನಮಗೆ ಮೀಸಲು ನೀಡಿ. ಜಿಲ್ಲಾ ಮಟ್ಟದ ಸಮಿತಿ ಪುನಶ್ಚೇತನಗೊಳಿಸಿ. ಖಾಸಗಿ ಕಂಪನಿಗಳಲ್ಲೂ ಮೀಸಲು ಕಲ್ಪಿಸಿ. ಉಚಿತ ನಿವೇಶನ ನೀಡಿ. ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಯೋಜನೆ ರೂಪಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಪೂಜಾರ, ಅನ್ವರ ಪಟೇಲ್, ವಿರೇಶ ಹಾಲಗುಂಡಿ, ಅನುರಾಧ, ರಾಯನಗೌಡ, ಮಂಜುನಾಥ, ಹನುಮಾ, ಆದಪ್ಪ, ಸಿದ್ದಲಿಂಗಮ್ಮ ಇತರರಿದ್ದರು.