ಅಳವಂಡಿ ಸಿಪಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಅಂಗವಿಕಲ ಮಕ್ಕಳಿಗೆ ಅರಿವು ಮತ್ತು ಕ್ರೀಡೆ ಕಾರ್ಯಕ್ರಮದಲ್ಲಿ ಶಿಕ್ಷಕ ಅಶೋಕ ತವದಿ ಮಾತನಾಡಿದರು. ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮುಖ್ಯಶಿಕ್ಷಕಿ ರೇಣುಕಾ 
ಕೊಪ್ಪಳ

ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ

ಅಳವಂಡಿ: ಅಂಗವಿಕಲ ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವಾಗಲಿ ಎಂದು ವಿಶೇಷ ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಪಲ್ಲೆದ ತಿಳಿಸಿದರು.
ಗ್ರಾಮದ ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕೊಪ್ಪಳ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಿಂದ ಹಮ್ಮಿಕೊಂಡಿದ್ದ ಅಳವಂಡಿ ವಲಯ ಮಟ್ಟದ ಅಂಗವಿಕಲ ಮಕ್ಕಳಿಗೆ ಅರಿವು ಮತ್ತು ಕ್ರೀಡೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ. ಅವರನ್ನು ಪ್ರತ್ಯೇಕವಾಗಿ ನೋಡುವ ಮನೋಧರ್ಮ ದೂರಾಗಬೇಕು. ಅಂಗವಿಕಲರನ್ನು ಅಶಕ್ತರೆಂಬ ಕೀಳರಿಮೆಯಿಂದ ನೋಡಬಾರದು. ಅವರಲ್ಲಿಯೂ ಅಗಾಧ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕಾರ್ಯವನ್ನು ಶಿಕ್ಷಕರು ಮತ್ತು ಪಾಲಕರು ಮಾಡಬೇಕು ಎಂದರು. ಶಿಕ್ಷಕ ಅಶೋಕ ತವದಿ ಮಾತನಾಡಿದರು.
ಹಾಲಿನ ಡೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುವ ಸಮಗ್ರ ಮಾಹಿತಿಯನ್ನು ಮಕ್ಕಳು ಪಡೆದುಕೊಂಡರು. ಕ್ರೀಡಾಕೂಟದಲ್ಲಿನ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ತಾಲೂಕಿನ ವಿವಿಧ ಶಾಲೆಗಳ ಅಂಗವಿಕಲ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.