ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ, ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಮುಖರಾದ ಬಸವರೆಡ್ಡಪ್ಪ, ಡಾ.ನಾಗರಾಜ, ಭುಜಂಗಸ್ವಾಮಿ, ಚೌಡಪ್ಪ, ಅರವಿಂದಪ್ಪ ಇತರರಿದ್ದರು. 
ಕೊಪ್ಪಳ

ಶ್ರದ್ಧೆಯ ಓದು ಸಾಧನೆಗೆ ದಾರಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣಪ್ರೇಮಿ ಬಸವರಡ್ಡೆಪ್ಪ ಹಳ್ಳಿಕೇರಿ ಅಭಿಮತ
  • ಅಳವಂಡಿ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಅಳವಂಡಿ: ವಿದ್ಯಾರ್ಥಿಗಳ ಆತ್ಮವಿಶ್ವಾಸ, ಛಲ ಹಾಗೂ ಶ್ರದ್ಧೆಯ ಓದು ಸಾಧನೆಗೆ ದಾರಿಯಾಗಲಿದೆ ಎಂದು ಶಿಕ್ಷಣಪ್ರೇಮಿ ಬಸವರಡ್ಡೆಪ್ಪ ಹಳ್ಳಿಕೇರಿ ಹೇಳಿದರು.
ಗ್ರಾಮದ ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂತರ ಓದಿನಿಂದ ಜ್ಞಾನ ಸಂಪಾದಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಮೊದಲನೆ ಘಟ್ಟ ಕಠಿಣ ಪರಿಶ್ರಮ, ಶ್ರದ್ಧೆಯಿಂದ ಓದುವುದು. ಸಾಧನೆಯೆಂಬ ಶಿಖರವೇರಲು ಮುಖ್ಯವಾಗಿ ಬೇಕಾಗಿರುವುದು ಶಿಸ್ತು ಹಾಗೂ ಸಂಯಮ ಇವುಗಳನ್ನು ಜೀವನದಲ್ಲಿ ನಿತ್ಯವೂ ಅಳವಡಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಎಂ.ಎಸ್.ಹೊಟ್ಟಿನ ಮಾತನಾಡಿ, ವಿದ್ಯಾರ್ಥಿಗಳು ವಿನಯ, ಸಂಸ್ಕಾರ, ವಿಧೇಯತೆ ಬೆಳೆಸಿಕೊಳ್ಳಬೇಕು. ಇದು ಇದ್ದರೆ ಮಾತ್ರ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ನಾಗರಾಜ ಹಾವಿನಾಳ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭುಜಂಗಸ್ವಾಮಿ ಇನಾಮದಾರ, ಚೌಡಪ್ಪ ಜಂತ್ಲಿ, ಅರವಿಂದಪ್ಪ ಬಿರಾದಾರ, ಮಂಜುನಾಥ ಹಿರೇಮಠ, ನಜರುದ್ದೀನ್ ಬಿಸರಳ್ಳಿ, ಇಸ್ಮಾಯಿಲ್ ಕವಲೂರು, ಹನುಮಂತ ಜಾಣಗಾರ, ಸಾಗರ ಉಪ್ಪಾರ, ಉಮಾ ಕರ್ಕಿಹಳ್ಳಿ, ಹನುಮಂತಪ್ಪ ಹಾಗೂ ಉಪನ್ಯಾಸಕರು ಇದ್ದರು.