ಗಂಗಾವತಿ ತಾಲೂಕಿನ ಬಸಾಪಟ್ಟಣ ವಲಯದ ದಾಸನಾಳದ ಗ್ರಾಹಕರ ಸೇವಾ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಹಮ್ಮಿಕೊಂಡ ಡಿಜಿಟಲ್ ಪೇ ಕಾರ್ಯಗಾರದಲ್ಲಿ ಗ್ರಾಹಕರಿಗೆ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಯಿತು. ಟ್ರಸ್ಟ್ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಚಂದ್ರಶೇಖರ್, ಅಡಿಟ್ ವಿಭಾಗದ ಯೋಜನಾಧಿಕಾರಿ ಮಂಜುನಾಥ, ಸೇವಾ ಪ್ರತಿನಿಧಿಗಳಾದ ತಸ್ಲೀಮಾ, ಪಾರ್ವತಿ ಇತರಿದ್ದರು. 
ಕೊಪ್ಪಳ

ಗ್ರಾಹಕರ ಅನುಕೂಲಕ್ಕಾಗಿ ಡಿಜಿಟಲ್ ಪೇ

ಪ್ರಮುಖ ಮುಖ್ಯಾಂಶಗಳು

  • ಟ್ರಸ್ಟ್ ಪ್ರಾದೇಶಿಕ ಯೋಜನಾಧಿಕಾರಿ ಚಂದ್ರಶೇಖರ್
  • ಗಂಗಾವತಿ ದಾಸನಾಳ ಕಾರ್ಯಗಾರ
ಗಂಗಾವತಿ: ತಾಲೂಕಿನ ಬಸಾಪಟ್ಟಣ ವಲಯದ ದಾಸನಾಳದ ಗ್ರಾಹಕರ ಸೇವಾ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಡಿಜಿಟಲ್ ಪೇ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಟ್ರಸ್ಟ್ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿ, ಗ್ರಾಹಕರ ಅನುಕೂಲಕ್ಕಾಗಿ ಡಿಜಿಟಲ್ ಪೇ ಆರಂಭಿಸಲಾಗಿದ್ದು, 500ರೂ.ಗಳಿಂದ 10ಸಾವಿರ ರೂ.ಗಳವರೆಗೂ ವಿಥ್ ಡ್ರಾ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಡಿಜಿಟಲ್ ಪೇ ಉದ್ದೇಶ, ಬಳಕೆ ರೀತಿ ಮತ್ತು ಅನುಕೂಲತೆ ಕುರಿತು ಕೇಂದ್ರ ಕಚೇರಿ ಅಡಿಟ್ ವಿಭಾಗದ ಯೋಜನಾಧಿಕಾರಿ ಮಂಜುನಾಥ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ದಯಾನಂದಂ, ತಾಲೂಕು ಸಿಎಸ್‌ಸಿ ನೋಡಲ್ ಅಧಿಕಾರಿ ಸ್ವಾಮಿದಾಸ್, ಸೇವಾ ಪ್ರತಿನಿಧಿಗಳಾದ ತಸ್ಲೀಮಾ, ಪಾರ್ವತಿ ಸೇರಿ ಒಕ್ಕೂಟ ಪದಾಧಿಕಾರಿಗಳು,ಸ್ವಸಹಾಯ ಸಂಘದ ಸದಸ್ಯರಿದ್ದರು.