ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಮಧುಮೇಹ ಉಚಿತ ತಪಾಸಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಜೆಎಂಎ್ಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಭಾನುವಾರ ಉದ್ಘಾಟಿಸಿದರು. ಮಧುಮೇಹ ತಜ್ಞ ಹುಬ್ಬಳ್ಳಿಯ ಡಾ.ಜಿ.ಬಿ. ಸತ್ತೂರ್, ಹಿರಿಯ ವೈದ್ಯ ಡಾ.ಜಿ. ಚಂದ್ರಪ್ಪ ಇತರರಿದ್ದರು.
- ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿಕೆ
- ಸಂವಾದ ಕಾರ್ಯಕ್ರಮ ಉದ್ಘಾಟನೆ
- ಮಧುಮೇಹ ಉಚಿತ ತಪಾಸಣೆ
ಗಂಗಾವತಿ: ಜೀವನ ಶೈಲಿ ಆರೋಗ್ಯ ಸುಧಾರಣೆಗೆ ಹಾದಿಯಾಗಲಿದ್ದು, ಸ್ವಸ್ಥ ಆರೋಗ್ಯಕ್ಕೆ ತಜ್ಞರ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜೆಎಂಎ್ಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಮಧುಮೇಹ ದಿನಾಚರಣೆ ನಿಮಿತ್ತ ಭಾರತೀಯ ವೈದ್ಯಕೀಯ ಸಂಘ ಮತ್ತು ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಮಧುಮೇಹ ಉಚಿತ ತಪಾಸಣೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾತ್ವಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕಿದ್ದು, ಮಿತ ಮತ್ತು ಹಿತ ಆಹಾರ ಪದ್ಧತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಧುಮೇಹ ತಜ್ಞ ಹುಬ್ಬಳ್ಳಿಯ ಡಾ.ಜಿ.ಬಿ. ಸತ್ತೂರ್ ಮಾತನಾಡಿ, ವ್ಯಾಯಾಮ ಮತ್ತು ಯೋಗಕ್ಕೆ ಆದ್ಯತೆ ನೀಡಬೇಕಿದ್ದು, ದಿನದ ಅರ್ಧಗಂಟೆ ಆರೋಗ್ಯ ಸುಧಾರಣೆ ಕ್ರಮಗಳ ಬಗ್ಗೆ ಗಮನಹರಿಸಬೇಕು. ನೆಮ್ಮದಿ ಬದುಕು, ಆಹಾರ ಕ್ರಮದಿಂದ ಮಧುಮೇಹ ನಿಯಂತ್ರಿಸಬಹುದಾಗಿದ್ದು, ನಿರ್ಲಕ್ಷಿಸಿದರೆ ದೇಹದ ಅಗಾಂಗಳ ಮೇಲೆ ಪರಿಣಾಮ ಬೀರಲಿದೆ.
ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಸಾರ್ವಜನಿಕರೊಂದಿಗೆ ಮಧುಮೇಹ ಕುರಿತು ಸಂವಾದ ನಡೆಯಿತು.
ಐಎಂಎ ತಾಲೂಕಾಧ್ಯಕ್ಷ ಡಾ.ಮಲ್ಲನಗೌಡ ಪಾಟೀಲ್, ಪದಾಧಿಕಾರಿಗಳಾದ ಡಾ.ಜಿ.ಚಂದ್ರಪ್ಪ ಡಾ.ಎ.ಸೋಮರಾಜು, ಡಾ.ಕೆ.ಎನ್.ಮಧುಸೂದನ, ಡಾ.ಸತೀಶ ರಾಯ್ಕರ್, ಡಾ.ವಿಜಯಗೌಡರ್, ಡಾ.ಎಸ್.ಎಚ್.ಮಗದಾಳ್, ಡಾ.ಸುನೀಲ್ ಅರಳಿ, ಡಾ.ನಾಗರಾಜ ಲೋಕರೆ ಇತರರಿದ್ದರು. ಶಿಬಿರದಲ್ಲಿ 300ಕ್ಕೂ ಹೆಚ್ಚು ರೋಗಿಗಳನ್ನು ಉಚಿತ ತಪಾಸಿಸಿ, ಚಿಕಿತ್ಸೆ ಸಲಹೆ ನೀಡಲಾಯಿತು.