ಅಗಳಕೇರಾ ಮಾರುತೇಶ್ವರ ಕಾರ್ತಿಕೋತ್ಸವ ಅಂಗವಾಗಿ ಭಾನುವಾರ ಮುಳ್ಳಿ ಗದ್ದುಗೆ ಭಕ್ತರು ಜಿಗಿದರು.
ಮುನಿರಾಬಾದ: ಸಮೀಪದ ಅಗಳಕೇರಾ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವ ಅಂಗವಾಗಿ ಭಾನುವಾರ ಮುಳ್ಳಿನ ಗದ್ದುಗೆ ಮೇಲೆ ಮೇಲೆ ಜಿಗಿದು ಭಕ್ತರು ಹರಕೆ ತೀರಿಸಿದರು.
ಮಾರುತೇಶ್ವರನಿಗೆ ವಿಶೇಷ ಪೂಜೆಯೊಂದಿಗೆ ಹರಕೆ ಮುಳ್ಳುಗಳ ಮೇಲೆ ಯುವಕರು ಜಿಗಿದು ಕುಣಿದಾಡಿದರು. ಎಲ್ಲವೂ ಆಂಜನೇಯ ಮಹಿಮೆ ಎಂಬ ನಂಬಿಕೆ ಭಕ್ತರಲ್ಲಿದೆ. ಬೆಳಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ಕುಂಕುಮಾರ್ಚನೆ ಮೂಲಕ ಪೂಜೆ ಸಲ್ಲಿಸಲಾಯಿತು. ಬೆಳಗಿನಜಾವ ಮಾರುತೇಶ್ವರ ಮೂರ್ತಿಯೊಂದಿಗೆ ಹುಚ್ಚಯ್ಯೋತ್ಸವ ಕಾರ್ಯಕ್ರಮ ಜರುಗಿತು.