ತಾಲೂಕಿನ ಭಾಗ್ಯನಗರದ ಸಾಯಿಬಾಬ ದೇವಸ್ಥಾನದ ಮುಂದೆ ಹಾಕಲಾಗಿದ್ದ ಮಾಜಿ ಸಿಎಂ ಸಿದ್ದರಾಯ್ಯ ಇಲ್ಲದ ಬ್ಯಾನರ್​ಗಳು 
ಕೊಪ್ಪಳ

ಬ್ಯಾನರ್​ಗಳಲ್ಲಿಲ್ಲ ಮಾಜಿ ಸಿಎಂ ಸಿದ್ದು ಫೋಟೋ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ ಕಾಮಗಾರಿ ಚಾಲನೆ ಕಾರ್ಯಕ್ರಮ

ಕೊಪ್ಪಳ : ಕೊಪ್ಪಳ ನಗರ ಹಾಗೂ ಭಾಗ್ಯನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಅಳವಡಿಸಲಾಗಿದ್ದ ಬ್ಯಾನರ್​ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಇಲ್ಲದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಕ್ಷದಿಂದ ಅಳವಡಿಸಲಾಗಿದ್ದ ಪ್ಲೇಕ್ಸ್​ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಶುಭಾಶಯ ಕೋರುವ ಬ್ಯಾನರ್​ಗಳಲ್ಲಿಯೂ ಸಿದ್ದರಾಮಯ್ಯ ಅವರ ಭಾವಚಿತ್ರ ಇರಲಿಲ್ಲ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೊಪ್ಪಳ ಜಿಲ್ಲೆಯ ಇಬ್ಬರು ನೂತನ ಸಚಿವವರು, ಡಿಸಿಸಿ ಅಧ್ಯಕ್ಷ, ಜಿಲ್ಲೆಯ ಪಕ್ಷದ ಕಾರ್ಯಕರ್ತರ ಭಾವಚಿತ್ರಗಳನ್ನು ಹಾಕಲಾಗಿದೆ. ಆದರೆ ಎರಡು ತಿಂಗಳ ಹಿಂದೆಯಷ್ಟೆ ಮುಖ್ಯ ಮಂತ್ರಯಾಗಿದ್ದ ಮಾಜಿ ಸಿಎಂ ಸಿದ್ದರಾಯ್ಯನವರ ಪೋಟೋ ಹಾಕಿಲ್ಲ.
ಸಿದ್ದರಾಮಯ್ಯನರನ್ನು ಹಲವು ಸಂದರ್ಭಗಳಲ್ಲಿ ತಮ್ಮ ರಾಜಕೀಯ ಗುರು ಹಾಗೂ ದೇವರು ಎಂದು ಹೇಳಿಕೊಂಡಿದ್ದ ಶಾಸಕ. ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರ ಭಾವಚಿತ್ರವನ್ನು ಬ್ಯಾನರ್​ಗಳಲ್ಲಿ ಹಾಕಿಸಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಅಥವಾ ಕಾರ್ಯಕರ್ತರು ಸಿದ್ದರಾಮಯ್ಯ ಫೋಟೋ ಹಾಕದಿರುವುದು ಶಾಸಕರ ಗಮನಕ್ಕೆ ಬಂದಿಲ್ಲವೇ ಎಂಬ ಚರ್ಚೆಯೂ ನಡೆದಿದೆ.
"

ನಮ್ಮ ನಾಯಕ ಸಿದ್ದರಾಮಯ್ಯನವರು ಕೇವಲ ಪ್ಲೇಕ್ಸ್​ನಲ್ಲಿ ಇಲ್ಲಾ ಎಂಬುದು ಮುಖ್ಯವಲ್ಲ. ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಇಡೀ ರಾಜ್ಯದ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಯಾರೋ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಕಿರುವ ಪಕ್ಷದ ಪ್ಲೇಕ್ಸ್​ ನಲ್ಲಿ ಅವರಿಲ್ಲ ಎನ್ನಾಬಾರದು. ಅವರು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿದ್ದಾರೆ.

— ರಾಘವೇಂದ್ರ ಹಿಟ್ನಾಳ ಶಾಸಕ ಕೊಪ್ಪಳ.