chandrababu naidu 
ಕೊಪ್ಪಳ

ನದಿ ಜೋಡಣೆಯಿಂದ ಅಭಿವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಕೊಪ್ಪಳ: ನದಿ ಜೋಡಣೆಯಿಂದ ದೇಶದ ಅಭಿವೃದ್ಧಿ ವೇಗವಾಗಲಿದೆ. ಬರಗಾಲದಿಂದ ತಪ್ಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಾವು ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರವೂ ಕೈ ಜೋಡಿಸಬೇಕೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಒತ್ತಾಯಿಸಿದರು.
ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂ ಕ್ರಸ್ಟ್​ಗೇಟ್​ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತ್ರಿವಳಿ ರಾಜ್ಯಗಳ ಜೀವನಾಡಿ ಟಿಬಿ ಡ್ಯಾಂ. 19ನೇ ಗೇಟ್​ ಕೊಚ್ಚಿ ಹೋದಾಗ ನಾವೂ ಸಹ ತ್ವರಿತ ಸ್ಪಂದನೆ ತೋರಿದೆವು. ಅಗತ್ಯ ಅನುದಾನ ಒದಗಿಸಿದೆವು. ಬೇಗ ಸರಿಪಡಿಸಿದ್ದಕ್ಕೆ ಕರ್ನಾಟಕಕ್ಕೆ ಅಭಿನಂದನೆ.
1983ರಲ್ಲಿ ನಾವು ನಾಲ್ಕೈದು ಸಿಎಂಗಳು ಸೇರಿ ಪ್ರಧಾನಿ ಅವರನ್ನು ಭೇಟಿ ಮಾಡಿ ಐದು ಟಿಎಂಸಿ ನೀರು ನೀಡಲು ತೀಮಾರ್ನಿಸಿದ್ದೆವು. ಇದೀಗ ಮೂರು ರಾಜ್ಯದ ಸಿಎಂಗಳು ಸೇರಿದ್ದೇವೆ. ಟಿಬಿ ಡ್ಯಾಂಗೆ ಬಹುದೊಡ್ಡ ಇತಿಹಾಸವಿದೆ. ನಮ್ಮ ನಾಡು ಈನದಿ ಅವಲಂಬಿಸಿ ನೀರಾವರಿ ಮಾಡುತ್ತಿದೆ. ವಿಜಯನಗರ ಆಡಳಿತ, ಮಂತ್ರಾಲಯ ಸೇರಿ ಅನೇಕ ಪವಿತ್ರ ಸ್ಥಳಗಳಿಗೆ ನದಿ ಆಸರೆಯಾಗಿದೆ. ನೀರು ಇದ್ದರೆ ನಾಗರಿಕತೆ, ಅಭಿವೃದ್ಧಿ.
ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ರೈಟ್​ ಪರ್ಸನ್​, ರೈಟ್​ ಪ್ಲೇಸ್​ ನಲ್ಲಿ ಇದ್ದರೆ ಎಲ್ಲವೂ ಸಾಧ್ಯ. ಅದು ಮೋದಿ. ಒಂದುದೇಶ ಒಂದು ರಸ್ತೆ, ಒಂದು ಟೆಲಿಕಮ್ಯೂನಿಕೇಫಿನ್​, ಒನ್​ ಗ್ರಿಡ್​ ವ್ಯವಸ್ಥೆ ಅಭಿವೃದ್ಧಿಗೆ ಪೂರಕ. ಅಮೇರಿಕಾದಲ್ಲೂ ಇಂಥ ವ್ಯವಸ್ಥೆ ಇಲ್ಲ. ಗಂಗಾ-ಕಾವೇರಿ ನದಿ ಜೋಡಿಸಿದಲ್ಲಿ ಭಾರತದ ಅಭಿವೃದ್ಧಿ ಯಾರಿಂದಲೂ ಸಾಧ್ಯವಿಲ್ಲ. ಯುಪಿ, ಮಧ್ಯ ಪ್ರದೇಶದಲ್ಲಿ ಅನುಫಿ್ಠಾನಗೊಳಿದಂತೆ ನಮ್ಮಲ್ಲೂ ನದಿ ಜೋಡಣೆ ಮಾಡಿ. ಗೋದಾವರಿ-ಕಾವೇರಿ ಯೋಜನೆ ರಾಷ್ಟ್ರೀಕರಣಗೊಳಿಸಿ.
ಎಲ್​ ನಿನೋ ಪ್ರಭಾವದಿಂದ ಈ ವರ್ಫಿ ಮಳೆ ಕೊರತೆಯಾಗಿದೆ.ಹೀಗಾಗಿ ನದಿ ಜೋಡಣೆ ಅನಿವಾರ್ಯ. ಇದರಿಂದ ಬರದಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ ಇದಕ್ಕೆ ನದಿ ಜೋಡಣೆಯೇ ಪರಿಹಾರ. ಮೊದಲು ಆಯಾ ರಾಜ್ಯದ ನದಿಗಳನ್ನು ಜೋಡಿಸುವ ಕೆಲಸವಾಗಬೇಕು. ಇದಕ್ಕೆ ನಮ್ಮ ಸಹಕಾರವಿದೆ. ಕೇಂದ್ರ ಸರ್ಕಾರ ಈ ಕೆಲಸ ಮಾಡಬೇಕು.ಇದು ಮೋದಿಯಿಂದ ಸಾಧ್ಯ. ಗಂಗಾ-ಕಾವೇರಿ ಕೂಡಿಸಿ. ನಾವೆಲ್ಲ ಬೇರೆ ಬೇರೆ ಭಾಫಿೆ, ಸಂಸ್ಕತಿ ಹೊಂದಿದ್ದೇವೆ. ಆದರೆ ನಾವೆಲ್ಲ ಭಾರತೀಯರು.
ರೈತರ ಹಿತದೃಷ್ಟಿಯಿಂದ ಇಂದು ನಡೆದ ಸಭೆ ಮಹತ್ವದ್ದು. ನಾವು ನೀರು ಉಳಿಸಬೇಕು. ರೈತರ ಬಾಳು ಬೆಳಗಿಸಬೇಕು. ನಾವೆಲ್ಲ ಒಂದಾಗಿ ಈ ಕೆಲಸಕ್ಕೆ ಕೈ ಹಾಕಬೇಕು ಎಂದು ಸಲಹೆ ನೀಡಿದರು.