ಚಿಕ್ಕವಂಕಲಕುಂಟಾ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಉಪತಹಸೀಲ್ದಾರ್ ವಿಜಯಕುಮಾರ ಚಾಲನೆ ನೀಡಿದರು. ದೇವಸ್ಥಾನದ ವ್ಯವಸ್ಥಾಪಕ ಚಂದಪ್ಪ ಕುರಿ, ಎಸ್ಡಿಎಂಸಿ ಅಧ್ಯಕ್ಷ ಬಾಲಪ್ಪ ಕುರಿ, ಮಹಾಲಿಂಗಪ್ಪ ಗುಡದೂರು, ರವೀಂದ್ರ ಗೌಡ್ರು, ಡಿ.ಎಸ್.ಪೂಜಾರ, ಕಲಾವಿದರಾದ ಸುಭಾಸಚಂದ್ರ ಲಿಂಗದಹಳ್ಳಿ ಇತರರಿದ್ದರು.
- ಉಪತಹಸೀಲ್ದಾರ್
- ವಿಜಯಕುಮಾರ
- ಸಲಹೆ
ಯಲಬುರ್ಗಾ: ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸಿಗೆ ಚೈತನ್ಯ ಮೂಡಲಿದೆ ಎಂದು ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರು ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಮ್ಯಾದನೇರಿಯ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜಾನಪದ ಕಲಾಸಂಘದಿಂದ ಹಮ್ಮಿಕೊಂಡಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಮಕ್ಕಳಲ್ಲಿಯೂ ಸಂಗೀತದ ಆಸಕ್ತಿ ಬರುವಂತೆ ಮಾಡಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಮಿತಿ ಅಧ್ಯಕ್ಷ ಸುಭಾಷ ಜಿರ್ಲಿ ಮಾತನಾಡಿ, ಈಗಿನ ಮೊಬೈಲ್ ಯುಗದಲ್ಲಿ ಹಳೆಯ ಜಾನಪದ, ತತ್ವಪದಗಳು, ಹಂತಿ ಪದ, ಗೀಗೀ ಪದಗಳನ್ನು ಹಾಡುವಂತ ಕಲಾವಿದರು ಮತ್ತು ಹಾಡುಗಳು ಮರೆಯಾಗುತ್ತಿವೆ. ಇಂತಹ ಕಲಾವಿದರನ್ನು ಮುಖ್ಯ ವಾಹಿನಿಗೆ ಕರೆ ತರಲು ಇಂತಹ ವೇದಿಕೆ ಬಹಳ ಅವಶ್ಯಕವಾಗಿವೆ. ಕಲಾವಿದರನ್ನು ಉಳಿಸಿ ಬೆಳೆಸಿ ಗೌರವಿಸಬೇಕಾಗಿದೆ. ಗ್ರಾಮೀಣ ಕಲೆಯನ್ನು ಉಳಿಸುವಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಕಲಾವಿದರಾದ ವೀರೇಶ ಚಿರತನಾಳ, ಈಶಪ್ಪ ಜಿರ್ಲಿ, ಅಶ್ವಿನಿ, ಮಲ್ಲಿಕಾರ್ಜುನ ಚಿರತನಾಳ, ದೇವರಾಜ ಗಿಣಗೇರಿ, ಹನುಮಂತ ಕುಮಾರ ಲಿಂಗನಬಂಡಿ ಇತರರಿದ್ದರು.