ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಿರುಳ್ಗನ್ನಡ ಕನ್ನಡ ಸಂ ಉದ್ಘಾಟನಾ ಕಾರ್ಯಕ್ರಮವನ್ನು ಸಾಹಿತಿ ರಮೇಶ ಬನ್ನಿಕೊಪ್ಪ ಉದ್ಘಾಟಿಸಿದರು. ಪ್ರಾಚಾರ್ಯ ವೈ.ಬಿ.ಅಂಗಡಿ, ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್ ಕಿಲ್ಲೇದಾರ, ಕನ್ನಡ ವಿಭಾಗದ ಮುಖ್ಯಸ್ಥ ಟಿ.ಯಮನೂರಪ್ಪ, ಡಾ.ತುಕಾರಾಮ್ ನಾಯ್ಕ, ಡಾ.ಸಿ.ಬಿ.ಹನುಮಂತಪ್ಪ, ಡಾ.ಪ್ರಕಾಶ ಬಳ್ಳಾರಿ, ಡಾ.ಮಹಾಂತೇಶ ನೆಲಾಗಣಿ ಇದ್ದರು. 
ಕೊಪ್ಪಳ

ಅಧ್ಯಯನದಿಂದ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ತಿರುಳ್ಗನ್ನಡ ಕನ್ನಡ
  • ಅಧ್ಯಯನ

ಅಧ್ಯಯನದಿಂದ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ

ಕೊಪ್ಪಳ: ಸಾಹಿತ್ಯ ಸಿದ್ಧ ವಸ್ತುವಲ್ಲ. ಸತತ ಅಧ್ಯಯನ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಕನ್ನಡ ನಾಡುನುಡಿ, ಸಂಸ್ಕೃತಿ ಹಾಗೂ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ರಮೇಶ ಬನ್ನಿಕೊಪ್ಪ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಐಚ್ಚಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳ ತಿರುಳ್ಗನ್ನಡ ಕನ್ನಡ ಸಂ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾತನಾಡಿದರು. ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ವಾದರಿಯಾಗಿದ್ದು, ಸಾಹಿತ್ಯ ಜನರ ಬದುಕಿನ ಅವಿಭಾಜ್ಯ ಭಾಗವಾಗಿದೆ ಎಂದರು.
ಪ್ರಾಚಾರ್ಯ ವೈ.ಬಿ.ಅಂಗಡಿ ವಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮನಸ್ಸನ್ನು ರೂಪಿಸುವಲ್ಲಿ ಇಂತಹ ಸಂಗಳ ಅಗತ್ಯವಿದೆ ಎಂದು ತಿಳಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್ ಕಿಲ್ಲೇದಾರ ಅವರು ಸಂವನ್ನು ಉದ್ಘಾಟಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಟಿ.ಯಮನೂರಪ್ಪ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಉಪನ್ಯಾಸಕರಾದ ಡಾ.ವಿಪ್ಲವಿ, ಡಾ.ಬಿ.ಆರ್.ಮಂಜುಳಾ, ಡಾ.ಷಣ್ಮುಖಪ್ಪ ಬೋದುರ, ಡಿ.ಬಸವರಾಜ್, ಹನುಮಪ್ಪ ಶಲೋಡಿ, ಡಾ.ತುಕಾರಾಮ್ ನಾಯ್ಕ, ಡಾ.ಸಿ.ಬಿ.ಹನುಮಂತಪ್ಪ, ಡಾ.ಪ್ರಕಾಶ ಬಳ್ಳಾರಿ, ಡಾ.ಮಹಾಂತೇಶ ನೆಲಾಗಣಿ ಇದ್ದರು.