ಉಳ್ಳಿಡಗ್ಗಿಯ ಎಸ್‌ಕೆಆರ್ ಪಿಯು ಕಾಲೇಜಿನಲ್ಲಿ ಕಿಷ್ಕಿಂಧಾ ಚಾರಣ ಬಳಗ, ಲಿವ್‌ವಿತ್ ಹ್ಯುಮ್ಯಾನಿಟಿಯಿಂದ ಹಮ್ಮಿಕೊಂಡಿದ್ದ ಯುವ ಚೈತನ್ಯ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಗುರುವಾರ ಉದ್ಘಾಟಿಸಿದರು. ಮಕ್ಕಳ ತಜ್ಞ ಡಾ.ಅಮರೇಶ ಕೆ.ಪಾಟೀಲ್, ಜೀವ್ಹೇಶ್ವರ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಕಲ್ಯಾಣಿ, ಕಾರ್ಯದರ್ಶಿ ರಾಮ್‌ಮೋಹನ್ ಇತರರಿದ್ದರು. 
ಕೊಪ್ಪಳ

ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಕಿವಿಮಾತು
  • ಯುವ ಚೈತನ್ಯ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ
ಗಂಗಾವತಿ: ಓದು ವ್ಯಕ್ತಿತ್ವಕ್ಕೆ ಭೂಷಣವಾಗಿದ್ದು, ಮೌಲ್ಯ ಮತ್ತು ಆದರ್ಶಗಳಿದ್ದಾಗ ಮಾತ್ರ ವ್ಯಕ್ತಿತ್ವ ಪ್ರಕಾಶಮಾನವಾಗಿ ಬೆಳೆಯಲು ಸಾಧ್ಯ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.
ಉಳ್ಳಿಡಗ್ಗಿಯ ಎಸ್‌ಕೆಆರ್ ಪಿಯು ಕಾಲೇಜಿನಲ್ಲಿ ಕಿಷ್ಕಿಂಧಾ ಚಾರಣ ಬಳಗ, ಲಿವ್‌ವಿತ್ ಹ್ಯುಮ್ಯಾನಿಟಿಯಿಂದ ಗುರುವಾರ ಹಮ್ಮಿಕೊಂಡಿದ್ದ ಯುವ ಚೈತನ್ಯ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಓದು ವ್ಯಕ್ತಿಯನ್ನು ಸಂಸ್ಕಾರವಂತನನ್ನಾಗಿ ಮಾಡಲಿದೆ. ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಎಲ್ಲ ಭಾವನೆಗಳನ್ನು ಅನುಭವಿಸಬೇಕೆಂದರೆ ಕಾವ್ಯ ಓದಬೇಕು. ಸೃಜನಶೀಲರಾಗಬೇಕಾದರೆ ಅಧ್ಯಯನಶೀಲರಾಗುವುದು ಅಗತ್ಯ ಎಂದರು.
ಸಂಕಲ್ಪ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಹಾಗೂ ವಕೀಲ ನಾಗರಾಜ ಗುತ್ತೇದಾರ್ ಮಾತನಾಡಿದರು. ಮಕ್ಕಳ ತಜ್ಞ ಡಾ.ಅಮರೇಶ ಕೆ.ಪಾಟೀಲ್, ಜೀವ್ಹೇಶ್ವರ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಕಲ್ಯಾಣಿ, ಕಾರ್ಯದರ್ಶಿ ರಾಮ್‌ಮೋಹನ್, ಚಾರಣ ಬಳಗದ ಸಂಚಾಲಕ ಆರ್.ಅರ್ಜುನ್, ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಾನಂದ ಮೇಟಿ, ಪ್ರಮುಖರಾದ ಶರಣಯ್ಯ ಹಿರೇಮಠ, ಪ್ರಕಾಶ ಮುರ್ನಾಳ, ಪವನ್‌ಕುಮಾರ್ ಗುಂಡೂರು, ಪದ್ಮನಾಭ ಬೇವಿನಾಳ, ಮಂಜು ಇಂಡಿ, ಹರನಾಯಕ, ದೇವರಾಜ ಹೇಮಗುಡ್ಡ, ಮಂಜುಳಾ, ಶಿವು ಗುಂಜಳ್ಳಿ, ಮುತ್ತು, ವರ್ಷಾ, ಪಂಪಾಪತಿ ಮುದ್ಗಲ್ ಇತರರಿದ್ದರು.