ಕನಕಗಿರಿಯ ಛತ್ರಪತಿ ಶಿವಾಜಿ ಮಹಾರಾಜರ ಸಹೋದರ ಸಂಭಾಜಿಯ ಸಮಾಧಿ ಎನ್ನಲಾದ ಸ್ಥಳಕ್ಕೆ ಪ್ರವಾಸೋದ್ಯಮ ಇಲಾಖೆಯ ಎಡಿ ನಾಗರಾಜ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಹಿಂದುಪರ ಸಂಘಟನೆಗಳ ಕಾರ್ಯಕರ್ತರಾದ ಅಯ್ಯನಗೌಡ ಅಳ್ಳಳ್ಳಿ, ಹನುಮೇಶ ಗಂಗಾಮತ ಇತರರಿದ್ದರು. 
ಕೊಪ್ಪಳ

ವಾಸ್ತವ ವರದಿ ಅಧಿಕಾರಿಗಳಿಗೆ ಸಲ್ಲಿಕೆ

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ನಿರ್ದೇಶಕ ನಾಗರಾಜ ಹೇಳಿಕೆ
  • ಕನಕಗಿಗರಿಯ ಸಾಂಭಾಜಿ ಸಮಾಧಿ ಎನ್ನಲಾದ ಸ್ಥಳಕ್ಕೆ ಭೇಟಿ
ಕನಕಗಿರಿ: ಹಿಂದು ಸಾಮ್ರಾಟ್ ಛತ್ರಪತಿ ಶಿವಾಜಿ ಸಹೋದರ ಸಾಂಭಾಜಿ ಸಮಾಧಿ ಎನ್ನಲಾದ ಸ್ಥಳಕ್ಕೆ ಶುಕ್ರವಾರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಭೇಟಿ ನೀಡಿ ಪರಿಶೀಲಿಸಿದರು.
ಮಾಜಿ ಶಾಸಕರೊಬ್ಬರು ಕನಕಗಿರಿಯಲ್ಲಿನ ಸಂಭಾಜಿ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಆದೇಶದನ್ವಯ ಸ್ಥಳವನ್ನು ಭೇಟಿ ನೀಡಲಾಗಿದೆ. ಆದರೆ, ಸ್ಥಳವು ಖಾಸಗಿಯವರ ಒಡೆತನದಲ್ಲಿರುವುದರಿಂದ ನಮಗೆ ಒಳಪಡುವುದಿಲ್ಲ. ಇದರಿಂದ ಅಭಿವೃದ್ಧಿಪಡಿಸಲು ಸಮಸ್ಯೆಯಾಗುತ್ತಿದೆ. ವಾಸ್ತವ ವರದಿಯನ್ನು ಕಚೇರಿಗೆ ಕಳುಹಿಸಿಕೊಡಲಾಗುವುದು ಎಂದು ಸಹಾಯಕ ನಿರ್ದೇಶಕ ನಾಗರಾಜ ತಿಳಿಸಿದರು.
ಹಿಂದುಪರ ಸಂಘಟನೆಗಳ ಕಾರ್ಯಕರ್ತರಾದ ಅಯ್ಯನಗೌಡ ಅಳ್ಳಳ್ಳಿ, ಹನುಮೇಶ ಗಂಗಾಮತ, ಬಸವರಾಜ ನಾಯಕ, ಹನುಮೇಶ ಮರಾಠಿ, ಗೋಪಾಲರೆಡ್ಡಿ ಇತರರಿದ್ದರು.