ಕೊಪ್ಪಳದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಜಿಲ್ಲಾ ಉಪನ್ಯಾಸಕರ ಸಂಘಕ್ಕೆ ನೂತವಾಗಿ ಆಯ್ಕೆಯಾದ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮವನ್ನು ಕೊಪ್ಪಳ ವಿವಿ ಪ್ರಭಾರ ಕುಲಪತಿ ಡಾ. ಎಸ್.ವಿ ಡಾಣಿ ಉದ್ಘಾಟಿಸಿದರು. ಡಿಡಿಪಿಯು ಜಿ.ಎಚ್.ಜಗದೀಶ, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ನಾಗೋಲಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಇದ್ದರು.
ಕೊಪ್ಪಳ : ಸರಕಾರಿ ಶಾಲೆ-ಕಾಲೇಜುಗಳು ಉಳಿದರೆ ಮಾತ್ರ ಪ್ರಜಾತಂತ್ರ ಉಳಿಯುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗ ಡಾ.ಎಸ್.ವಿ.ಡಾಣಿ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಪ್ರತಿಭಾ ಪುರಸ್ಕಾರ, ಜಿಲ್ಲಾ ಉಪನ್ಯಾಸಕರ ಸಂಘಕ್ಕೆ ನೂತವಾಗಿ ಆಯ್ಕೆಯಾದ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರಿ ಶಾಲೆ&ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿರುತ್ತದೆ. ಆ ಯೋಜನೆಗಳ ಫಲವಾಗಿಯೇ ಇಂದು ಪಿಯುಸಿ ಉತ್ತಮ ಫಲಿತಾಂಶ ಬರುತ್ತಿದೆ. ಮುಂದೆಯೂ ಸಹ ಉತ್ತಮ ಫಲಿತಾಂಶ ಬಂದು ನಮ್ಮ ಜಿಲ್ಲೆಯಲ್ಲಿ ಪ್ರತಿಭವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿ ಮತ್ತು ಮಕ್ಕಳು ಓದಿನ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್ರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಸಲಹೆ ನೀಡಿದರು.
ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ, ನಮ್ಮ ಸಂಘದಿಂದ ಆಡಳಿತಾತ್ಮಕ ವಿಷಯವಾಗಿ ಪ್ರಾಚಾರ್ಯರಿಗೆ ತರಭೇತಿ, ವಿಷಯವಾರು ಉಪನ್ಯಾಸಕರಿಗೆ ಕಾರ್ಯಗಾರ, ಪ್ರತಿ ವರ್ಷ ನಿವೃತ್ತರಿಗೆ ಸನ್ಮಾನ ಮತ್ತು ಜಿಲ್ಲೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.
ಡಿಡಿಪಿಯು ಜಿ.ಎಚ್.ಜಗದೀಶ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ, ಹಿರಿಯ ಪ್ರಾಚಾರ್ಯ ರಾಜಶೇಖರ ಪಾಟೀಲ್, ಮಂಜುನಾಥಸ್ವಾಮಿ, ಡಾ.ರವಿಚವ್ಹಾಣ, ಲಲಿತಮ್ಮ, ಶಿವಾನಂದ ಮೇಟಿ, ಡಾ,ವೀರೇಶಕುಮಾರ, ಟಿ.ಸಿ ಶಾಂತಪ್ಪ, ಬಸವರಾಜ, ಎಸ್.ಎಚ್.ಪಾಟೀಲ್, ಎನ್.ಪಾಂಡುರಂಗ ಇತರರಿದ್ದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಜಿಲ್ಲೆಯಲ್ಲಿ ದ್ವಿತಿಯ ಪಿಯುಸಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನದ ವಿಭಾಗದಲ್ಲಿ ಅತಿಹೆಚ್ಚು ಅಂಕ ಪಡೆದ ಸರಕಾರಿ, ಮುರಾರ್ಜಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಒಟ್ಟು ಹತ್ತು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಎರಡು ಸಾವಿರ ರೂಪಾಗಳ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.