ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಬಸವರಾಜ್ ಶೀಲವಂತರ್, ಕಾಸಿಂ ಸರ್ದಾರ್, ಶರಣು ಗಡ್ಡಿ, ತುಕಾರಾಮ್ ಪಾತ್ರೋಟಿ, ಎಸ್.ಎ. ಗಫಾರ್ ಇತರರಿದ್ದರು.
- ಕಟ್ಟಡ ಕಾರ್ಮಿಕ ಸಂಘಗಳಿಂದ ಪ್ರತಿಭಟನೆ
ಕೊಪ್ಪಳ : ಕಟ್ಟಡ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಮಂಗಳವಾರ ನಗರದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಐಎಫ್ಟಿಯು ಜಿಲ್ಲಾ ಮುಖಂಡ ಬಸವರಾಜ್ ಶೀಲವಂತರ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸರ್ಕಾರ ಸಮರ್ಪಕವಾಗಿ ಬಳಸುತ್ತಿಲ್ಲ. ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಹೈಕೋರ್ಟ್ ಆದೇಶದಂತೆ ಯಾವುದೇ ವಿಳಂಬವಿಲ್ಲದೆ ಸಹಾಯಧನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಮುಖಂಡ ಕಾಸಿಂ ಸರ್ದಾರ್ ಮಾತನಾಡಿ, ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರವನ್ನು ರದ್ದುಪಡಿಸಿ, ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸಲು ಮಾಸಿಕ ಪಿಂಚಣಿಯನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ಮದುವೆ ಸಹಾಯಧನವನ್ನು 2 ಲಕ್ಷಕ್ಕೆ ಏರಿಸಬೇಕು ಹಾಗೂ ಹೆರಿಗೆ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ಮುಖಂಡ ಶರಣು ಗಡ್ಡಿ ಮಾತನಾಡಿ, ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಅನಗತ್ಯವಾಗಿ ಕಿಟ್ ಖರೀದಿಸುವ ಪದ್ಧತಿ ನಿಲ್ಲಿಸಿ, ಹಣವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.
ಐಎಫ್ಟಿಯು ಜಿಲ್ಲಾ ಮುಖಂಡರಾದ ತುಕಾರಾಮ್ ಪಾತ್ರೋಟಿ, ಎಸ್.ಎ. ಗಫಾರ್, ಎಐಸಿಸಿಟಿಯು ಮುಖಂಡರಾದ ಹನುಮಂತಪ್ಪ ಹುಲಿಹೈದರ, ಚನ್ನಬಸಪ್ಪ, ಗಾಳೇಪ್ಪ ಮುಂಗೋಲಿ, ಅಮೀರ್ ಪಾಫಿಾ, ಮಂಜುನಾಥ, ಪಕೀರಪ್ಪ, ಪ್ರಕಾಶ ದೇವರಮನಿ, ನಾಗರಾಜ್ ಹುಲಿಗಿ, ಶರಣಪ್ಪ ಗೊರ್ಪಡೆ, ಯಮನೂರಪ್ಪ, ಕುಮಾರ್, ಚಾಂದ್ ಭಾಫಿಾ, ಬಸವರಾಜ್ ಬೊಮ್ಮನಾಳ, ನಾಗಪ್ಪ ತಹಶೀಲ್ದಾರ್, ಯಲ್ಲಪ್ಪ ಬೋಚನಲ್ಲಿ ಮರಿಸ್ವಾಮಿ, ಫಿಣ್ಮುಖ ಇತರರಿದ್ದರು.