ಕೊಪ್ಪಳ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತಡ ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರಸಭೆಯ ಪ್ರಭಾರಿ ಪೌರಾಯುಕ್ತ ಮಂಜುನಾಥ ಗುಂಡೂರ್​ಗೆ ಮನವಿ ಸಲ್ಲಿಸಲಾಯಿತು. ಸಂಘಟನೆಗಳ ಮುಖಂಡರಾದ ಎಸ್​.ಎ. ಗಫಾರ್​, ಬಸವರಾಜ್​ ಶೀಲವಂತರ್​, ತುಕಾರಾಮ್​ ಪಾತ್ರೋಟಿ, ಮುದುಕಪ್ಪ ಹೊಸಮನಿ, ರಾಮಣ್ಣ ಕಂದಾರಿ, ತುಕಾರಾಮ್​ ಪಾತ್ರೋಟಿ, ಮುದುಕಪ್ಪ ಹೊಸಮನಿ, ಡಾ: ಬಿ. ಜ್ಞಾನ ಸುಂದರ ಇದ್ದರು. 
ಕೊಪ್ಪಳ

ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಜನಪರ ಸಂಘಟನೆಗಳ ಒಕ್ಕೂಟದಿಂದ ಮನವಿ
ಕೊಪ್ಪಳ : ನಗರದ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಗಿಡಗಂಟಿ, ಪ್ಲಾಸ್ಟಿಕ್​ ತ್ಯಾಜ್ಯ ಹಾಗೂ ಹೂಳು ಸ್ವಚ್ಛಗೊಳಿಸಿ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರಸಭೆ ಎದುರು ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿ. ನಗರಸಭೆಯ ಪ್ರಭಾರಿ ಪೌರಾಯುಕ್ತ ಮಂಜುನಾಥ ಗುಂಡೂರ್​ ಮನವಿ ಸಲ್ಲಿಸಲಾಯಿತು.
ನಗರದಲ್ಲಿನ ರಾಜಕಾಲುವೆ ಹೂಳಿನಿಂದ ತುಂಬಿದ್ದು, ಅನೇಕ ಕಡೆಗಳಲ್ಲಿ ಅನಧಿಕೃತ ಕಟ್ಟಡಗಳ ಒತ್ತುವರಿ ನಡೆದಿರುವುದರಿಂದ ಮಳೆನೀರು ಸರಾಗವಾಗಿ ಹರಿಯಲು ಅಡಚಣೆ ಉಂಟಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಕಾಲುವೆ ಮತ್ತು ಎಲ್ಲಾ ವಾರ್ಡುಗಳ ಚರಂಡಿಗಳನ್ನು ಯುದ್ಧೋಪಾದಿಯಲ್ಲಿ ಸ್ವಚ್ಛಗೊಳಿಸಬೇಕು, ಒತ್ತುವರಿ ತೆರವುಗೊಳಿಸಿ ಶಾಶ್ವತ ನವೀಕರಣ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಉಂಟು ಮಾಡುವುದು ಮತ್ತು ಜೀವಕ್ಕೆ ಸಂಚಕಾರ ಬರುವ ಭೀತಿ ಇದೆ.ಈ ಕುರಿತು ಮೇ. 4 ರಂದು ಜಿಲ್ಲಾಧಿಕಾರಿಗಳಿಗೆ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಳೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ ಎರಡು ವಾರಗಳು ಕಳೆದರೂ ಯಾವುದೇ ಸೂಕ್ತ, ಮ ಕೈಗೊಳ್ಳದಿರುವುದು ಅತ್ಯಂತ ಖೇದಕರ ಮತ್ತು ಅಧಿಕಾರಿಗಳ ರ್ನಿಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.ಮಳೆ ಬರುವ ತುರ್ತು ಪರಿಸ್ಥಿತಿಗಳಲ್ಲೂ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪವೇಸಗಿದ ಅಧಿಕಾರಿಗಳಿಗೆ ತಕ್ಷಣ ಅಮಾನತುಗೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘಟನೆಗಳ ಮುಖಂಡರಾದ ಎಸ್​.ಎ. ಗಫಾರ್​, ಬಸವರಾಜ್​ ಶೀಲವಂತರ್​, ತುಕಾರಾಮ್​ ಪಾತ್ರೋಟಿ, ಮುದುಕಪ್ಪ ಹೊಸಮನಿ, ರಾಮಣ್ಣ ಕಂದಾರಿ, ತುಕಾರಾಮ್​ ಪಾತ್ರೋಟಿ, ಮುದುಕಪ್ಪ ಹೊಸಮನಿ, ಡಾ: ಬಿ. ಜ್ಞಾನ ಸುಂದರ, ಮೊಹಮ್ಮದ್​ ಗೌಸ್​ ನೀಲಿ, ಮುದ್ದುರಾಜ್​ ಚನ್ನದಾಸರ್​, ಗಾಳೆಪ್ಪ ಮುಂಗೋಲಿ ಇತರರಿದ್ದರು.
"

ಮನವಿ ಸ್ವೀಕರಿಸಿ ರಾಜಕಾಲುವೆ ಮತ್ತು ಚರಂಡಿ ಸ್ವಚ್ಛತೆಗೆ ಮೂರು ತಂಡಗಳನ್ನು ರಚಿಸಲಾಗಿದ್ದು, ಶೀಘ್ರವೇ ಕಾರ್ಯ ಆರಂಭವಾಗಲಿದೆ.

— ಮಂಜುನಾಥ ಗುಂಡೂರ್​ ಪ್ರಭಾರಿ ಪೌರಾಯುಕ್ತ ಕೊಪ್ಪಳ ನಗರಸಭೆ.