ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿ ಮೋಸ ಮಾಡಿದ ಶಿಕ್ಷಕ ಬಸವರಾಜ ಕಟ್ಟಿಮನಿಯನ್ನು ತಕ್ಷಣ ಬಂಧಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್​ ಜಿಲ್ಲಾ ಸಮಿತಿ ಒತ್ತಾಯಿಸಿ ಎಸ್ಪಿ ಡಾ. ರಾಮ್​. ಎಲ್​. ಅರಸಿದ್ದಿಗೆ ಮನವಿ ಸಲ್ಲಿಸಲಾಯಿತು. ಎಸ್​.ಎಫ್​.ಐ. ಜಿಲ್ಲಾಧ್ಯಕ್ಷ ಶಿವಕುಮಾರ್​, ಕಾರ್ಯದರ್ಶಿ ಬಾಲಾಜಿ, ಪದಾಧಿಕಾರಿಗಳಾದ ಹುಸೇನಪ್ಪ ಕೆ., ಬಾಳಪ್ಪ ಹುಲಿಹೈದರ, ರಮೇಶ್​ ಬಿ. ಬಸವರಾಜ ಗೋನಾಳ ಇತರರಿದ್ದರು. 
ಕೊಪ್ಪಳ

ಮದುವೆ ಭರವಸೆ ನೀಡಿ ವಂಚನೆ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ಕೊಪ್ಪಳ : ಜಿಲ್ಲೆಯ ಕನಕಗಿರಿ ತಾಲೂಕು ಹುಲಸನಟ್ಟಿ ಗ್ರಾಮದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಮೋಸ ಮಾಡಿದ ಶಿಕ್ಷಕ ಬಸವರಾಜ ಕಟ್ಟಿಮನಿ ಅವರನ್ನು ತಕ್ಷಣ ಬಂಧಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್​ ಜಿಲ್ಲಾ ಸಮಿತಿ ಒತ್ತಾಯಿಸಿ ಗುರುವಾರ ಕೊಪ್ಪಳ ಎಸ್ಪಿ ಡಾ. ರಾಮ್​. ಎಲ್​. ಅರಸಿದ್ದಿಗೆ ಮನವಿ ಸಲ್ಲಿಸಿತು.
ಕೊಪ್ಪಳದಲ್ಲಿ 2020ರಲ್ಲಿ ಬಿ.ಎಸ್​.ಸಿ ಪದವಿ ಅಭ್ಯಾಸ ಮಾಡುತ್ತಿದ್ದ ವೇಳೆ ಬಸವರಾಜ ಕಟ್ಟಿಮನಿ ಯುವತಿಯನ್ನು ಪ್ರೀತಿಸುವುದಾಗಿ ಹೇಳಿ ಒತ್ತಾಯಪೂರ್ವಕವಾಗಿ ಹಲವಾರು ಬಾರಿ ದೌರ್ಜನ್ಯ ಎಸಗಿದ್ದಾನೆ. ಬಳಿಕ ಯುವತಿ ಮದುವೆಗೆ ಒತ್ತಾಯಿಸಿದಾಗ ನಿರಾಕರಿಸಿದ. ಆ ವಿಚಾರವಾಗಿ ಊರಿನ ಹಿರಿಯರು ಮತ್ತು ಸಂಬಂಧಿಕರ ಮಧ್ಯಸ್ಥಿಕೆಯಲ್ಲಿ ನಿಶ್ಚಿತಾರ್ಥ ಮಾಡಲಾಗಿತ್ತು. ಆದರೆ, ನಿಶ್ಚಿತಾರ್ಥದ ನಂತರವೂ ಮದುವೆ ಮುಂದೂಡುತ್ತಾ ಬೇರೆ ಮಹಿಳೆಯೊಂದಿಗೆ ಮದುವೆ ನೋಂದಣಿ ಮಾಡಿಕೊಂಡು ವಂಚಿಸಿರುವುದಾಗಿ ಆರೋಪಿಸಲಾಗಿದೆ.
ವಂಚನೆಗೆ ಒಳಗಾದ ಯುವತಿ ಹಾಗೂ ಕುಟುಂಬದವರಿಗೆ ಬೆದರಿಕೆ ಹಾಕಿ, ಯುವತಿಯೊಂದಿಗೆ ನಡೆದ ಸಂಭಾಷಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದು. ಈ ಕುರಿತು ಕನಕಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿ ಬಸವರಾಜ ಕಟ್ಟಿಮನಿ ಹಾಗೂ ಸಹಕರಿಸಿದ ಕುಟುಂಬದ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ಜೊತೆಗೆ, ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಸರ್ಕಾರದಿಂದ ಲಭ್ಯವಿರುವ ಎಲ್ಲಾ ಪರಿಹಾರಗಳನ್ನು ತಕ್ಷಣ ಒದಗಿಸಬೇಕೆಂದು ಆಗ್ರಹಿಸಲಾಯಿತು.