ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಕೆಪಿಎಸ್​ ಶಾಲೆ ಕಟ್ಟಡ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಸೋಮವಾರ ಅಡಿಗಲ್ಲು ನೆರವೇರಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ, ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ.ನಾಗರಳ್ಳಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಸ್​.ಬಾಲಚಂದ್ರನ್​, ಪ್ರಮುಖರಾದ ಜುಲ್ಲು ಖಾದ್ರಿ ಇದ್ದರು.  
ಕೊಪ್ಪಳ

ಬಜೆಟ್​ನಲ್ಲಿ ಕೊಪ್ಪಳಕ್ಕೆ ಕ್ಯಾನ್ಸರ್​ ಆಸ್ಪತ್ರೆ

ಪ್ರಮುಖ ಮುಖ್ಯಾಂಶಗಳು

  • 100 ರೂ. ಕೋಟಿ ಅನುದಾನಕ್ಕೆ ಬೇಡಿಕೆ
ಕೊಪ್ಪಳ : ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಕೊಪ್ಪಳ ಕ್ಯಾನ್ಸರ್​ ಆಸ್ಪತ್ರೆಗೆ 100 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಟ್ಟಿರುವೆ. ಸಿಎಂ ಸಿದ್ದರಾಮಯ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆಂದು ಶಾಸಕ ರಾವೇಂದ್ರ ಹಿಟ್ನಾಳ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಗೊಂಡಬಾಳ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ 8.56 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಕ್ಷೇತ್ರ ಅಭಿವೃದ್ಧಿಗೆ ಬೇಕಾದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿರುವೆ. ಬಹುತೇಕ ಪ್ರಸ್ತಾವನೆಗಳಿಗೆ ಸಿಎಂ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಬಜೆಟ್​ನಲ್ಲಿ ಜಿಲ್ಲಾ ಕೇಂದ್ರಕ್ಕೆ ಹಲವು ಕೊಡುಗೆ ನೀಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹ್ಯಾಟಿ ಗ್ರಾಮದ ಕೆಪಿಎಸ್​ ಶಾಲೆ ಕಟ್ಟಡ, ಬಹಾದ್ದೂರ ಬಂಡಿ&-ಹೊಸಳ್ಳಿ ರಸ್ತೆ ಕಾಮಗಾರಿ, -ಕುಣಿಕೇರಿ&ನಂದಿ ಬಂಡಿ ದೇವಸ್ಥಾನ ರಸ್ತೆ ಕಾಮಗಾರಿ, ಎನ್​ಎಚ್​-50ರಿಂದ ಕೇಂದ್ರೀಯ ವಿದ್ಯಾಲಯಕ್ಕೆ ತೆರಳುವ ರಸ್ತೆ ಕಾಮಗಾರಿಗಳಿಗೆ ಭುಮಿಪೂಜೆ ನೆರವೇರಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ, ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ.ನಾಗರಳ್ಳಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಸ್​.ಬಾಲಚಂದ್ರನ್​, ಪ್ರಮುಖರಾದ ಜುಲ್ಲು ಖಾದ್ರಿ,
ವಿರುಪಣ್ಣ ನವೋದಯ, ತೋಟಪ್ಪ ಕಾಮನೂರು, ಶಿವಕುಮಾರ್​ ಶೆಟ್ಟರ್​ ಇತರರಿದ್ದರು.