ಗಂಗಾವತಿಯ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಶ್ರೀ ನೀಲಕಂಠೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ, ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಕೆ.ಎಂ.ಅರವಿಂದ ಯೋಗಿ ಇತರರಿದ್ದರು. 
ಕೊಪ್ಪಳ

ಗಂಗಾವತಿ ಮುಖ್ಯ ರಸ್ತೆ ದುರಸ್ತಿಗೊಳಿಸಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಮನವಿ
ಗಂಗಾವತಿ: ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಶ್ರೀ ನೀಲಕಂಠೇಶ್ವರ ವೃತ್ತದಲ್ಲಿನ ಗುಂಡಿಗಳ ಮುಂದೆ ಕುಳಿತು ಮಂಗಳವಾರ ಪ್ರತಿಭಟನೆ ನಡೆಸಿ ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಎ.ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಗುಂಡಿಗಳು ನೀರು ತುಂಬಿ ರಸ್ತೆ ಯಾವುದು, ಗುಂಡಿ ಯಾವುದು ಗೊತ್ತಾಗುತ್ತಿಲ್ಲ. ಆಟೋ ಸೇರಿ ಲಘು ವಾಹನಗಳ ಅಪಘಾತ ಸಾಮಾನ್ಯವಾಗುತ್ತಿದ್ದು, ಸಾವು, ನೋವುಗಳಾಗುತ್ತಿವೆ. ಸರ್ಕಾರಿ ಜಾಗಗಳು ಒತ್ತುವರಿಯಾಗುತ್ತಿದ್ದು, ಪ್ರಭಾವಿಗಳ ಪಾಲಾಗುತ್ತಿವೆ. ುಟ್‌ಪಾತ್ ಒತ್ತುವರಿ ತೆರವುಗೊಳಿಸಬೇಕಿದ್ದು, ಅತಿಕ್ರಮಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳೋಳಬೇಕು. ಕೆಲ ಉದ್ಯಾನಗಳು ಅತಿಕ್ರಮಣಕ್ಕೊಳಗಾಗಿದ್ದು, ಅವುಗಳ ರಕ್ಷಣೆ ಜತೆಗೆ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಒಳಚರಂಡಿ ಯೋಜನೆ ಅವೈಜ್ಞಾನಿಕವಾಗಿದ್ದು, ಸರಿಪಡಿಸಬೇಕು. ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೂತ್ರಾಲಯ ನಿರ್ಮಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಕೆ.ಎಂ. ಅರವಿಂದ ಯೋಗಿ, ಮಂಜುನಾಥ ಚನ್ನಾದಾಸರ, ಭೋಗೇಶ ಆನೆಗೊಂದಿ, ಮೇಘರಾಜ್, ರಗಡಪ್ಪ ಹೊಸಳ್ಳಿ, ಬಿ.ಕೆ.ಗಣೇಶ್, ಮಂಜುನಾಥ ಹಿರೇಮಠ, ರೆಹಮಾನ್, ಹರೀಶ್, ಮಹೆಬೂಬ್, ಹನುಮೇಶ, ಸೋಮಶೇಖರ್ ಇತರರಿದ್ದರು.