ಕೊಪ್ಪಳದ ಅಶೋಕ ವೃತ್ತದಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ಹಾಗೂ ಲವ್​ ಜಿಹಾದ್​ ಸಮಸ್ಯೆಗಳನ್ನು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಡಿಸಿ ಸಿದ್ರಾಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ಬಜರಂಗದಳದ ಪ್ರಾಂತ ವ್ಯವಸ್ಥಾಪಕ ಪುಂಡಲಿಕ ದಳವಾಯಿ, ಜಿಲ್ಲಾಧ್ಯಕ್ಷ ಸಂಗಮೇಶ ಹಿರೇಮಠ, ಜಿಲ್ಲಾ ಸಂಚಾಲಕ ಅರುಣ್​ ಹೂಗಾರ, ಪ್ರಮೂಖರಾದ ಸುಮಂಗಲ ಹಿರೇಮಠ, ಸಿದ್ದು ಭಗತ್​ ಇತರರಿದ್ದರು. 
ಕೊಪ್ಪಳ

ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಹಿಂದೂ ಪರಿಷತ್​ನಿಂದ ಮನವಿ
ಕೊಪ್ಪಳ : ಸಮಾಜ ವಿರೋಧಿ ಚಟುವಟಿಕೆಗಳು ಹಾಗೂ ಲವ್​ ಜಿಹಾದ್​ ಸಮಸ್ಯೆಗಳನ್ನು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗದಳ ಕಾರ್ಯಕರ್ತರು ಗುರುವಾರ ನಗರದ ಅಶೋಕ ವೃತ್ತದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದೇಶದ ಸಾಮಾಜಿಕ ಸಾಮರಸ್ಯ ಹಾಗೂ ಅಂತರಿಕ ಭದ್ರತೆಗೆ ಧಕ್ಕೆಯಾಗುತ್ತಿರುವ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ. ವಿವಿಧ ರಾಜ್ಯಗಳಲ್ಲಿ ನಡೆದಂತೆ ಎಂದು ಹೇಳಲಾಗುತ್ತಿರುವ ಮಹಿಳೆಯರ ಶೋಷಣೆ, ಬಲವಂತದ ಮತಾಂತರ ಹಾಗೂ ಬ್ಲಾಕ್​ಮೇಲ್​ ಪ್ರಕರಣಗಳ ಕುರಿತು ತನಿಖೆ ನಡೆಸಬೇಕು. ಜಿಮ್​ಗಳಂತಹ ಸ್ಥಳಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಕ್ರಮವಹಿಸಬೇಕು.
ಜಿಲ್ಲೆಯ ಅಳವಂಡಿ ಹತ್ತಿರದ ಕಂಪ್ಲಿ ಮುಸ್ತಫಾ ಖಾದ್ರಿ ಎಂಬ ಜಿಹಾದಿಯನ್ನು ಆದಷ್ಟು ಬೇಗ ಬಂದಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲವ್​ ಜಿಹಾದಿ ಪ್ರಕರಣಗಳು, ಅನೇಕ ಹಿಂದೂ ಹೆಣ್ಣುಮಕ್ಕಳ ಶೋಷಣೆ, ಬಲವಂತದ ಮತಾಂತರ ಒಂದರ ಮೇಲೊಂದು ಹೆಚ್ಚಾಗುತ್ತಿವೆ. ಈ ರೀತಿಯ ಘಟನೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ರಮ ಭೂ ಅತಿಕ್ರಮಣ, ಸಾರ್ವಜನಿಕ ಆಸ್ತಿ ಹಾನಿ ಹಾಗೂ ಕುಟುಂಬಗಳ ಮೇಲೆ ದಾಳಿಗಳಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಮಟ್ಟದಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ದೇಶದ ಏಕತೆ ಮತ್ತು ಶಾಂತಿಯನ್ನು ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.