ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಶುಕ್ರವಾರ ಕುಷ್ಠ ರೋಗ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಿಎಚ್​ಒ ಡಾ.ಟಿ.ಲಿಂಗರಾಜು, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೆಶಕ ಕರ್ಣಕುಮಾರ್​, ಡಾ.ರಾಮಾಂಜನೇಯ, ಡಾ.ಶಶಿಧರ ಎ., ಡಿಡಿಪಿಐ ಸೋಮಶೇಖರಗೌಡ ಪಾಟೀಲ್​ ಇದ್ದರು.  
ಕೊಪ್ಪಳ

ಕುಷ್ಠರೋಗ ನಿಮೂರ್ಲನೆಗೆ ಸಹಕರಿಸಿ : ಡಿಸಿ ಇಟ್ನಾಳ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಮನವಿ
ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಕುಷ್ಠರೋಗ ನಿಮೂರ್ಲನೆ ಮಾಡಬೇಕಿದೆ. ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು. 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಠರೋಗ ನಿಮೂರ್ಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ. ಸ್ಪರ್ಶ್​ ಕುಷ್ಠರೋಗ ಬಗ್ಗೆ ಜಾಗೃತಿ ಮೂಡಿಸಿ. ರೋಗ ಪತ್ತೆ ಕೆಲಸ ಮಾಡಿ. ಜನರಲ್ಲಿ ಈ ರೋಗದ ಬಗ್ಗೆ ತಪು$್ಪ ಕಲ್ಪನೆ ಇದೆ. ಅದನ್ನು ಹೋಗಲಾಡಿಸಿ. ಆಪ್ತ ಸಮಾಲೋಚನೆ ನಡೆಸಿ. "ತಾರತಮ್ಯ ಕೊನೆಗೊಳಿಸುವುದು, ಘನತೆ ಕಾಪಾಡುವುದು' ಈ ವರ್ಷದ ಘೋಷಾ ವಾಕ್ಯ. ಅದರ ಅನುಸಾರ ಕ್ರಮವಹಿಸಿ ಎಂದು ಸೂಚಿಸಿದರು. 
ಕಾರ್ಯಕ್ರಮದಲ್ಲಿ "ಸ್ಪರ್ಶ್​ ಕುಷ್ಠರೋಗ ಜಾಗೃಥಿ ಅಭಿಯಾನ- 2026' ಕರಪತ್ರ ಬಿಡುಗಡೆ ಮಾಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಿಎಚ್​ಒ ಡಾ.ಟಿ.ಲಿಂಗರಾಜು, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೆಶಕ ಕರ್ಣಕುಮಾರ್​, ಡಾ.ರಾಮಾಂಜನೇಯ, ಡಾ.ಶಶಿಧರ ಎ., ಡಿಡಿಪಿಐ ಸೋಮಶೇಖರಗೌಡ ಪಾಟೀಲ್​ ಇತರರಿದ್ದರು.