ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಬುಧವಾರ ಕೊಪ್ಪಳದಲ್ಲಿ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನ್ಯಾಯಾಧೀಶ ಮಹಾಂತೇಶ ದರಗದ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ ಇದ್ದರು.
- ಡಿಸಿ ಡಾ.ಸುರೇಶ ಬಿ.ಇಟ್ನಾಳ ಹೇಳಿಕೆ
- ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಕೊಪ್ಪಳ: ಮಾನವ ಹಕ್ಕುಗಳ ರಕ್ಷಣೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಕ್ಷಣೆಗೆ ನಾವೆಲ್ಲ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನಾತ್ಮಕ, ಶಾಸನಬದ್ಧ ಹಾಗೂ ಖಾಸಗಿ ಹಕ್ಕುಗಳಿವೆ. ಸಮಾನತೆ, ಸಮಾನ ಕಾನೂನು ರಕ್ಷಣೆ, ಶೋಷಣೆ ವಿರುದ್ಧ, ಗೌರವಯುತ ಜೀವನ, ಕಲಿಕೆ, ದೇಶದ ಯಾವುದೇ ಸ್ಥಳಕ್ಕೆ ಹೋಗುವುದು, ಧಾರ್ಮಿಕ ಸ್ವಾತಂತ್ರ$್ಯ ಸೇರಿ ಅನೇಕ ಹಕ್ಕುಗಳನ್ನು ಸಂವಿಧಾನ ನೀಡಿದೆ. ಹುಟ್ಟಿನಿಂದ ಮಾನವ ಹಕ್ಕುಗಳು ಲಭಿಸಲಿವೆ. ಅವುಗಳ ಉಲ್ಲಂನೆ ಆಗದಂತೆ ನೋಡಿಕೊಳ್ಳಬೇಕು. ಹಕ್ಕುಗಳ ಜತೆಗೆ ನಮ್ಮ ಕರ್ತವ್ಯವೂ ಮುಖ್ಯ. ನಮ್ಮ ಹಕ್ಕು ಅನುಭವಿಸುವ ಜತೆಗೆ ಇನ್ನೊಬ್ಬರ ಹಕ್ಕುಗಳನ್ನು ರಸಲು ಪಣ ತೊಡಬೇಕು. ನೀರು, ಪರಿಸರ ಎಲ್ಲರಿಗೂ ಅವಶ್ಯವಿದ್ದು ಉಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಮಾತನಾಡಿ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಮನುಷ್ಯನಾಗಿಯೇ ನೋಡಿಕೊಳ್ಳಬೇಕೆಂದ ಆಶಯದಿಂದ ವಿಶ್ವ ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತದೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಹೀಗಿದ್ದರೂ ಅನೇಕ ತಾರತಮ್ಯ ಕಾಣುತ್ತೇವೆ. ಅಸ್ಪರಶ್ಯತೆ ಆಚರಣೆ ಮಾನವ ಹಕ್ಕಿಗೆ ವಿರುದ್ಧವಾದದ್ದು. ಇಂಥ ಕೆಟ್ಟ ಆಚರಣೆ ನಿಮೂರ್ಲನೆ ಆಗಬೆಕು. ಒಬ್ಬರ ಹಕ್ಕುಗಳನ್ನು ಮತ್ತೊಬ್ಬರು ಉಲ್ಲಂಘನೆ ಮಾಡದಂತೆ ನೊಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಪ್ರಭುರಾಜ ನಾಯಕ ಉಪನ್ಯಾಸ ನೀಡಿ ಮಾತನಾಡಿ, ಮಾನವ ಹಕ್ಕು ಸರಳವಾಗಿವೆ. ಆದರೆ, ಸರಳಕ್ಕೆ ಸಿಗುತ್ತಿಲ್ಲ. ಶುದ್ಧ ಗಾಳಿ, ನೀರು ಎಲ್ಲರ ಹಕ್ಕು. ಅದೇ ಇಂದು ದುರ್ಲಭವಾಗುತ್ತಿದೆ. ಶುದ್ಧ ಗಾಳಿ, ನೀರು ಹಣ ಕೊಟ್ಟು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸಿದರು.
ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ ಚೌಗಲಾ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾಯ್ ಕೃಷ್ಣಮೂರ್ತಿ ದೇಸಾಯಿ, ಡಿಡಿಪಿಯು ಜಗದೀಶ ಜಿ.ಎಚ್., ಯುನಿಸ್ೆ ಪ್ರತಿನಿಧಿ ಹರೀಶ್ ಜೋಗಿ ಇತರರಿದ್ದರು.
ಎಲ್ಲರೂ ಹುಟ್ಟಿನಿಂದಲೇ ಜೀವಿಸುವ ಹಕ್ಕು ಪಡೆದಿರುತ್ತಾರೆ. ಆ ಕಾರಣಕ್ಕಾಗಿ ನಮ್ಮ ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಿದೆ. ಅದರಂತೆ ನಮ್ಮ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿ ಜತೆಗೆ ಇಂದಿರಾ ಆಹಾರ ಕಿಟ್ ಮೂಲಕ ಎಣ್ಣೆ, ಬೆಳೆ, ಸಕ್ಕರೆ, ಉಪ್ಪು ಹಾಗೂ ಇತರೆ ಅವಶ್ಯ ವಸ್ತುಗಳನ್ನು ಕೊಡಲಾಗುತ್ತಿದೆ.