ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ಕ್ರೀಡಾ ಕಾರ್ಯದರ್ಶಿ ಶರಣಪ್ಪ ರಡ್ಡೇರ, ನಿರ್ದೇಶಕರಾದ ಪ್ರಾಣೇಶ ಪೂಜಾರ, ನಾಗರಾಜ ನಾಯಕ ಡೊಳ್ಳಿನ ಇದ್ದರು.
- ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿಕೆ
ಕೊಪ್ಪಳ: ಯುವಕರು ಮಹಾತ್ಮರ ಜನ್ಮಸ್ಥಳಗಳಿಗೆ ಸೈಕಲ್ ಯಾತ್ರೆ ಮೂಲಕ ತೆರಳುತ್ತಿರುವುದು ಇತರರಿಗೆ ಮಾದರಿ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅಭಿಪ್ರಾಯಪಟ್ಟರು.
ಆರೋಗ್ಯ ಇಲಾಖೆ ನೌಕರ ಶಿವರಾಯಪ್ಪ ಹಾಗೂ ರಂಗ ಕಲಾವಿದ ನವೀನ್ ಅವರು ಕೊಪ್ಪಳದಿಂದ ಭಗತ್ ಸಿಂಗ್ ಜನ್ಮ ಸ್ಥಳವಾದ ಪಂಜಾಬಿನ ಬಾಗ ಗ್ರಾಮಕ್ಕೆ ಸೈಕಲ್ನಲ್ಲಿ ತೆರಳುತ್ತಿದ್ದು ಗುರುವಾರ ಅವರ ಪ್ರಯಾಣಕ್ಕೆ ಶುಭಕೋರಿ ಮಾತನಾಡಿದರು.
ಮಹಾತ್ಮರ ಜನ್ಮ ಸ್ಥಳಗಳಿಗೆ ಸೈಕಲ್ ಯಾತ್ರೆಯ ಮೂಲಕ ಸ್ವಚ್ಛ ಭಾರತ- ಸ್ವಸ್ಥ ಭಾರತ ಹಾಗೂ ಪರಿಸರ ಉಳಿಸಿ ಜೀವಸಂಕಲ ಬೆಳಸಿ ಎಂಬ ಘೋಷವಾಕ್ಯದಡಿ ದೇಶ ಪರ್ಯಟನೆ ಮಾಡುತ್ತಿರುವುದು ಶ್ಲಾನೀಯ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಯುವಕರು ಸೈಕಲ್ ಮೂಲಕ ಮಹಾತ್ಮರ ಜನ್ಮ ಸ್ಥಳಕ್ಕೆ ತೆರಳುತ್ತಿರುವುದು ಇತರರಿಗೆ ಮಾದರಿ. 2500 ಕಿ.ಮೀ. ದೂರದ ಊರಿಗೆ ಸೈಕಲ್ ಮೂಲಕ ತೆರಳುತ್ತಿದ್ದು ಶುಭವಾಗಲಿ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಮಾತನಾಡಿ, ಸರ್ಕಾರಿ ನೌಕರರಾಗಿದ್ದರೂ ವೃತ್ತಿ ಜತೆಗೆ ಸಾಹಸ ಪ್ರವೃತ್ತಿ ಬೆಳೆಸಿಕೊಂಡಿರುವುದು ಹೆಮ್ಮೆಯ ಸಂಗತಿ. ಯುವಕರು ಈಗಾಗಲೇ ಕಟಕ್ ಹಾಗೂ ಪೋರಬಂದರಿನ ಸೈಕಲ್ ಯಾತ್ರೆ ಯಶಸ್ವಿಯಾಗಿ ಮುಗಿಸಿದ್ದಾರೆ. ಇಲಾಖೆಯಿಂದ ಅಗತ್ಯ ಬೆಂಬಲ ನೀಡಲಾಗುವುದೆಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ್, ಆನಂದತಿರ್ಥ ಪ್ಯಾಟಿ ಮಾತನಾಡಿದರು. ನೌಕರರ ಸಂದ ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ಕ್ರೀಡಾ ಕಾರ್ಯದರ್ಶಿ ಶರಣಪ್ಪ ರಡ್ಡೇರ, ನಿರ್ದೇಶಕರಾದ ಪ್ರಾಣೇಶ ಪೂಜಾರ, ನಾಗರಾಜ ನಾಯಕ ಡೊಳ್ಳಿನ, ಸಾಹಿತಿ ಶರಣಪ್ಪ ಬಿಳಿಎಲಿ, ಹನುಮಂತಪ್ಪ ಕುರಿ, ಮಲ್ಲಪ್ಪ ಗುಡದನ್ನವರ ಇತರರಿದ್ದರು.