ಕೊಪ್ಪಳದಲ್ಲಿ ವಿವಿಧ ವಾರ್ಡ್​ ಜನರು ಜೆಡಿಎಸ್​ ಸೇರ್ಪಡೆಗೊಂಡರು. ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ನಗರ ಮಹಿಳಾ ಘಟಕ ಅಧ್ಯಕೆ ನಿರ್ಮಲ ಮೇದಾರ್​, ಉಪಾಧ್ಯೆ ರತ್ನಮ್ಮ ಹಿರೇಮಠ ಇದ್ದರು.  
ಕೊಪ್ಪಳ

ಜೆಡಿಎಸ್​ ಸದಸ್ಯರ ಸಂಖ್ಯೆ ಹೆಚ್ಚಳ, ಸಿ.ವಿ.ಚಂದ್ರಶೇಖರ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಸಿ.ವಿ.ಚಂದ್ರಶೇಖರ ಹೇಳಿಕೆ
  • ಜೆಡಿಎಸ್​ ಪಕ್ಷದ ಪ್ರಮುಖರ ಸಭೆ
ಕೊಪ್ಪಳ: ನಮ್ಮ ಪಕ್ಷಕ್ಕೆ ಕೊಪ್ಪಳ ನಗದರಲ್ಲಿಯೇ ಸುಮಾರು 20,000 ನೂತನ ಸದಸ್ಯರನ್ನು ಸೇರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದರು.
ನಗರದ ಜೆಡಿಎಸ್​ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಕೊಪ್ಪಳದಲ್ಲಿ ಜೆಡಿಎಸ್​ ಸದೃಢವಾಗಿದೆ. ಇನ್ನಷ್ಟು ಬಲಪಡಿಸುವ ಕೆಲಸವಾಗಬೇಕಿದೆ. ಮೂಲ ಸೌಕರ್ಯಗಳನ್ನು ಪಡೆಯಲು ಹೋರಾಟ ರೂಪಿಸೋಣ. ನಮ್ಮ ಕಾರ್ಯಕರ್ತರ ಸಕ್ರಿಯವಾಗಿದ್ದರೆ ಎಲ್ಲವೂ ಸಾಧ್ಯ. ವಾರ್ಡ್​ವಾರು ಮನೆ ಮನೆಗೆ ತೆರಳಿ ಸದಸ್ಯತ್ವ ಮಾಡಿಸಿ. ಕೊಪ್ಪಳ ನಗರದಲ್ಲಿಯೇ 20 ಸಾವಿರ ಹೊಸ ಸದಸ್ಯತ್ವ ಮಾಡುವ ಗುರಿಹಾಕಿಕೊಳ್ಳಲಾಗಿದೆ ಎಂದರು.
ಜೆಡಿಎಸ್​ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಯುವಕರು, ಮಹಿಳೆಯರನ್ನು ಪಕ್ಷಕ್ಕೆ ಪರಿಚಯಿಸಿ. ಡಿಜಿಟಲ್​ ಸದಸ್ಯತ್ವ ನೋಂದಣಿ ಹೆಚ್ಚಿಸೋಣ. ಪ್ರತಿ ಪ್ರದೇಶಕ್ಕೆ ಪ್ರಭಾರಿಗಳನ್ನು ನಿಯೋಜಿಸಲಾಗುವುದು. ಜನಸಂಪರ್ಕದಲ್ಲಿ ಇರುವವರಿಗೆ ಮಾತ್ರ ನಗರಸಭೆಗೆ ಚುನಾವಣೆಗೆ ಕಣಕ್ಕಿಳಿಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಮಾತನಾಡಿ, ಪ್ರತಿ ಬೂತ್​ಗೆ ಅಧ್ಯಕ್ಷ, ಕಾರ್ಯದರ್ಶಿ ಮತ್ತು 20 ಕಾರ್ಯಕರ್ತರ ತಂಡ ರಚಿಸಲಾಗುವುದು. ಅವರು ಮತದಾರರ ವಿವರ, ಸಮಸ್ಯೆಗಳು, ಸ್ಥಳಿಯ ಅಗತ್ಯಗಳ ವರದಿ ಸಂಗ್ರಹಿಸಿ. ಪ್ರತಿ ಬೂತ್​ನಲ್ಲಿ ಕಾರ್ಯಕರ್ತರ ಬಳಗ ಪುನರ್​ ಸಂಘಟಿಸುವುದು ಕಡ್ಡಾಯ ಎಂದು ಸೂಚಿಸಿದರು.
ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಮಾತನಾಡಿ, ಮುಂಬರುವ ಎಲ್ಲ ಚುನಾವಣೆ ಸಿದ್ಧತೆಗೆ ಬೂತ್​, ವಾರ್ಡ್​ವಾರು ವಾಟ್ಸಪ್​ ಗುಂಪು ರಚಿಸಿ. ಪಕ್ಷದ ತತ್ವ, ನಾಯಕತ್ವ, ಗುರಿ ಹಾಗೂ ಉದ್ದೇಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಮುಖಂಡರು ಮತ್ತು ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
ಒಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ನಗರ ಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ ಮಾತನಾಡಿದರು.
ವಿವಿಧ ವಾರ್ಡ್​ಗಳ 30ಕ್ಕೂ ಹೆಚ್ಚು ಮುಖಂಡರು ಜೆಡಿಎಸ್​ ಸೇರಿದರು. ನಗರ ಮಹಿಳಾ ಘಟಕ ಅಧ್ಯಕೆ ನಿರ್ಮಲ ಮೇದಾರ್​, ಉಪಾಧ್ಯೆ ರತ್ನಮ್ಮ ಹಿರೇಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್​ ಏಣಿಗಿ, ಪ್ರವಿಣ್​ ಕುಮಾರ್​ ಇಟಗಿ, ನಗರ ಘಟಕದ ಪದಾಧಿಕಾರಿಗಳಾದ ಶ್ರೀನಿವಾಸ್​ ಗೊಂದಳಿ, ಗಂಗಾಧರ್​ ವಸ್ತ್ರದ, ಶಿವರಾಜ್​ ಮಠಪತಿ , ರಂಗಪ್ಪ ಭೋವಿ, ಬಸವ ಶ್ರೀ, ಶಂಭು ಕೂಕನಪಳ್ಳಿ, ಜಿಲ್ಲಾ ಸಹ ವಕ್ತಾರಾದ ಯಮನೂರಪ್ಪ ಕಟಿಗಿ, ಮಾರುತಿ, ವೀರೇಶ್​ ಅಂಗಡಿ, ಮೌನೇಶ್​ ಕಿನ್ನಾಳ ಇತರರಿದ್ದರು.