ಯಲಬುರ್ಗಾದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಅಪರ ಸರ್ಕಾರಿ ಅಭಿಯೋಜಕ ಮಲ್ಲನಗೌಡ ಪಾಟೀಲ್ ಮಾತನಾಡಿದರು. ಸಾರಿಗೆ ಘಟಕ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಉಸ್ತುವಾರಿ ಬಿ.ಎಸ್.ತಳವಾರ, ಕಲೇಶ ಇತರರಿದ್ದರು.
- ರಸ್ತೆ ಸುರಕ್ಷತಾ ಸಪ್ತಾಹ
- ಸುಗಮ ಸಂಚಾರ
ಸುಗಮ ಸಂಚಾರಕ್ಕೆ ಶಿಸ್ತು ಬೆಳೆಸಿಕೊಳ್ಳಿ
ಯಲಬುರ್ಗಾ: ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಶಿಸ್ತು ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು. ಇದು ಸುಗಮ ಸಂಚಾರಕ್ಕೆ ಅನುಕೂಲ ಎಂದು ಅಪರ ಸರ್ಕಾರಿ ಅಭಿಯೋಜಕ ಮಲ್ಲನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಸಾರಿಗೆ ಘಟಕದ ಕಚೇರಿಯಲ್ಲಿ ಇತ್ತೀಚೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗ ಹಾಗೂ ಯಲಬುರ್ಗಾ ಸಾರಿಗೆ ಘಟಕದಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮಾತನಾಡಿದರು. ಜನಸಾಮಾನ್ಯರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಸಪ್ತಾಹ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಂಚಾರ ಸುರಕ್ಷತಾ ಸೂಚನೆಗಳು, ಅಪಘಾತ ನಿಯಂತ್ರಣ, ಜೀವನ ರಕ್ಷೆ, ಮಕ್ಕಳು, ವಾಹನ ಚಾಲಕರು ಏನು ಮಾಡಬೇಕು. ಪಾದಚಾರಿಗಳು ಹೇಗೆ ಸಂಚರಿಸಬೇಕು, ಸಂಚಾರ ಸಂಕೇತಗಳು, ಸುಗಮ ಸಂಚಾರಕ್ಕೆ ಉಪಾಯಗಳು, ಕಡ್ಡಾಯವಾಗಿ ಪಾಲಿಸಬೇಕಾದ ಚಿಹ್ನೆಗಳು, ಕಾಲು ನಡಿಗೆಯ ಸುರಕ್ಷಿತ ದಾರಿ, ಸಿಗ್ನಲ್‌ನಲ್ಲಿ ಆಗುವ ಅಪಘಾತಗಳು ಸೇರಿ ಇತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮುಡಿಸಬೇಕು ಎಂದರು.
ಸಾರಿಗೆ ಘಟಕದ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಉಸ್ತುವಾರಿ ಬಿ.ಎಸ್. ತಳವಾರ, ಪ್ರಮುಖರಾದ ಕಲೇಶ, ಕನಕಪ್ಪ, ಬಸವರಾಜ ಇತರರಿದ್ದರು.