ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಕಾರ್ಯಕ್ರಮವನ್ನು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಹು&ಧಾ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಈರೇಶ ಬಿ. ಅಂಚಟಗೇರಿ, ವಿಪ ಸದಸ್ಯ ಸುಶೀಲ್​ ನಮೋಶಿ, ಡಾ.ಬಸವರಾಜ ಕ್ಯಾವಟರ್​,ಪ್ರಾಚಾಯೆರ್ ಉಷಾದೇವಿ ಹಿರೇಮಠ ಇದ್ದರು.  
ಕೊಪ್ಪಳ

ಶಿಕ್ಷಣದೊಟ್ಟಿಗೆ ಸಂಸ್ಕಾರ ಬೆಳೆಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಅಭಿನವ ಶ್ರೀಗಳ ಸಲಹೆ
ಕೊಪ್ಪಳ : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳುವಂತೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಬದುಕಿಗೆ ಶಿಕ್ಷಣ ಮುಖ್ಯ. ಅದರೊಂದಿಗೆ ಸಂಸ್ಕಾರ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.
ಹು&ಧಾ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಈರೇಶ ಬಿ. ಅಂಚಟಗೇರಿ ಮಾತನಾಡಿ, ಕಾನೂನು ಶಿಕ್ಷಣವು ನ್ಯಾಯ, ನೈತಿಕತೆ ಮತ್ತು ಸಾಮಾಜಿಕ ಬದ್ಧತೆಯ ಸಂಕೇತ. ವಿದ್ಯಾರ್ಥಿಗಳು ನಿಮ್ಮ ಜ್ಞಾನ ಸಮಾಜದ ಒಳಿತಿಗಾಗಿ ಬಳಸಿ. ನಿರಂತರ ಕಲಿಕೆ, ಶಿಸ್ತು ಮತ್ತು ಆತ್ಮವಿಶ್ವಾಸದ ಮೂಲಕ ಉನ್ನತ ಸಾಧನೆ ಮಾಡಿ ಎಂದರು.
ವಿಪ ಸದಸ್ಯ ಸುಶೀಲ್​ ನಮೋಶಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಿರಿ. ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಯ ಪರವಾಗಿ ಕಾರ್ಯನಿರ್ವಹಿಸಿ. ಶಿಕ್ಷಣದೊಂದಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ಡಾ.ಬಸವರಾಜ ಕ್ಯಾವಟರ್​ ಮಾತನಾಡಿದರು. ಎಸ್​. ರಾಧಾಕೃಷ್ಣನ್​, ಪ್ರಾಚಾಯೆರ್ ಉಷಾದೇವಿ ಹಿರೇಮಠ, ಉಪ ಪ್ರಾಚಾರ್ಯ ಬಸವರಾಜ ಎಂ.ಎಸ್​. ಇತರರಿದ್ದರು.