ಕೊಪ್ಪಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಮಲ್ಲಿಕಾರ್ಜುನ ಬಳ್ಳಾರಿ, ಮೋಹನಕುಮಾರ, ಸುರೇಶ ಶಡಿಶಾಳ್​, ಸದಾನಂದ ನೆಲಕುದರಿ ಇದ್ದರು.  
ಕೊಪ್ಪಳ

ನೌಕರರಿಗೆ ಕಡಿಮೆ ದರದ ಔಷಧ, ಸಿ.ಎಸ್​.ಷಡಾಕ್ಷರಿ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಪದಾಧಿಕಾರಿಗಳೊಂದಿಗೆ ಸಂವಾದ
  • ರಾಜ್ಯ ಸರ್ಕಾರಿ‌ ನೌಕಕರಿಗೆ ಬಂಪರ್
  • ಕಡಿಮೆ ದರದಲ್ಲಿ ದಿನಸಿ ಸಾಲ ಸೌಲಭ್ಯ
ಕೊಪ್ಪಳ: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರಿಗೆ ಕಡಿಮೆ ದರದ ಔಷಧ, ಕಿರಾಣಿ ಹಾಗೂ ಎಂಎಸ್​ಐಎಲ್​ ಅಂಗಡಿ ಸೇವೆ ದೊರಕಿಸಿಕೊಡಲಾಗುವುದು. ಐದಾರು ತಿಂಗಳಲ್ಲಿ ಕೊಪ್ಪಳದಲ್ಲಿ ಕೇಂದ್ರ ತಲೆ ಎತ್ತಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಭರವಸೆ ನೀಡಿದರು.
ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಸಂಘದಿಂದ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ಸಂದ ಪದಾಧಿಕಾರಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯ 1200 ನಿರ್ದೇಶಕರನ್ನು ಸೇರಿಸಲಾಗಿದೆ. ಸಂದಲ್ಲಿ 5.25 ಲಕ್ಷ ಸದಸ್ಯರಿದ್ದು, 8,500 ನಿರ್ದೇಶಕರಿದ್ದಾರೆ. ಎಲ್ಲರೂ ನಮ್ಮ ಜವಾಬ್ದಾರಿ ನಿಭಾಯಿಸೋಣ. ನಿಮ್ಮ ಶಾಸಕರು, ವಿಪ ಸದಸ್ಯರಿಂದ ಅನುದಾನ ಪಡೆ ಅಭಿವೃದ್ಧಿ ಮಾಡಿ. ಆರ್ಥಿಕ ಶಿಸ್ತು ಮುಖ್ಯ. ಅನೇಕ ಯೋಜನೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಮೊಬೈಲ್​ ಆ್ಯಪ್​ ಮೂಲಕ ಕೇವಲ ಒಂದು ಗಂಟೆಯಲ್ಲಿ ಸಾಲ ಸೌಲಭ್ಯಪಡೆವ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ತಿಂಗಳು ಸಾಲ ಮರುಪಾವತಿ ಮಾಡಿದರೆ ಬಡ್ಡಿ ಕಟ್ಟಬೇಕಿಲ್ಲ. ಕೆಲವರು ಇಲ್ಲಸಲ್ಲದ ಸುಳ್ಳು ಸಂದೇಶ ಹಬ್ಬಿಸುತ್ತಾರೆ. ಅದಕ್ಕೆಲ್ಲ ಕಿವಿಗೊಡಬೇಡಿ ಎಂದರು.
ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಮಾತನಾಡಿದರು. ವಿವಿಧ ವೃಂದ ಅಧಿಕಾರಿಗಳು ಮನವಿ ಸಲ್ಲಿಸಿದರು. ನೌಕರರ ಸಮಸ್ಯೆಗಳ ಕುರಿತು ಸಂವಾದ ನಡೆಯಿತು. ರಾಜ್ಯ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಳ್ಳಾರಿ, ಮೋಹನಕುಮಾರ, ಸುರೇಶ ಶಡಿಶಾಳ್​, ಸದಾನಂದ ನೆಲಕುದರಿ, ಸಂಜೀವ್​ ಸತರಡ್ಡಿ, ಮಹೇಶ ಸಬರದ್​, ಬಸವರಾಜ ಬಳ್ಳಾರಿ, ಮಲ್ಲಿಕಾರ್ಜುನಗೌಡ್ರು, ಶಿವಪ್ಪ ಜೋಗಿ, ಜಯತೀರ್ಥ ದೇಸಾಯಿ, ಮಹ್ಮದ್​ ಆಸೀಫ್​ ಅಲಿ, ಬೀರಪ್ಪ ಅಂಡಗಿ ಇತರರಿದ್ದರು.

22 ರಾಜ್ಯದಲ್ಲಿನ ನೌಕರರು ಕೇಂದ್ರ ವೇತನ ಪಡೆಯುತ್ತಿದ್ದಾರೆ. 2026ರ ಜನೆವರಿಯಲ್ಲಿ ಕೇಂದ್ರ ವೇತನ ಪರಿಷ್ಕರಣೆ ಆಗಲಿದೆ. ಆಗ ಹೋರಾಟಕ್ಕೆ ಕೈ ಜೋಡಿಸಿ. 2026-27ಕ್ಕೆ ಕೇಂದ್ರ ವೇತನ ಪಡೆದೇ ತೀರುತ್ತೇವೆ. ಎನ್​ಪಿಎಸ್​ ರದ್ದುಪಡಿಸಿ ಒಪಿಎಸ್​ ಜಾರಿ ಮಾಡಿಸಲಾಗುವುದು. ಅನಗತ್ಯವಾಗಿ ಡೋಂಗಿಗಳ ಮಾತು ನಂಬಿ ಹಾಳಾಗದಿರಿ.