ಗಂಗಾವತಿ ತಾಲೂಕಿನ ದೇವಘಾಟದ ತುಂಗಭದ್ರಾ ನದಿ ದಂಡೆಯ ಮೇಲೆ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿರುವುದು. 
ಕೊಪ್ಪಳ

ದೇವಘಾಟದಲ್ಲಿ ಮೊಸಳೆ ಪ್ರತ್ಯಕ್ಷ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ತಾಲೂಕಿನ ದೇವಘಾಟದ ತುಂಗಭದ್ರಾ ನದಿ ದಂಡೆಯ ಮೇಲೆ ಬೃಹತ್ ಗಾತ್ರದ ಮೊಸಳೆ ಮಂಗಳವಾರ ಕಾಣಿಸಿಕೊಂಡಿದ್ದು, ಕೃಷಿಕರು ಭಯಭೀತರಾಗಿದ್ದಾರೆ.
ದೇವಘಾಟದಲ್ಲಿ ಪುರಾತನ ಕಾಲದ ಅಮೃತೇಶ್ವರ ದೇವಾಲಯವಿದ್ದು, ಎದುರಿನ ನದಿ ದಂಡೆಯ ಮೇಲೆ ಮೊಸಳೆ ಇರುವುದನ್ನು ಕೃಷಿಕರು ಮತ್ತು ದೇವಾಲಯಕ್ಕೆ ಬಂದ ಭಕ್ತರ ಕಣ್ಣಿಗೆ ಬಿದ್ದಿದೆ. ಮೊಸಳೆ ಕಾಣಿಸಿಕೊಂಡ ತುಂಗಭದ್ರಾ ನದಿಯ ಎರಡು ತೀರದಲ್ಲಿ ಕೃಷಿ ಪ್ರದೇಶವಿದ್ದು, ಬೇಸಾಯಕ್ಕೆ ಕೃಷಿಕರು ಮತ್ತು ಕೂಲಿಕಾರರು ನದಿ ಮೂಲಕವೇ ತೆರಳಬೇಕಿದೆ. ಅದರಂತೆ ದೇವಘಾಟಕ್ಕೆ ಬರುವ ಬಹುತೇಕರು ಇದೇ ನದಿಯಲ್ಲಿ ಸ್ನಾನ ಮಾಡುತ್ತಿದ್ದು, ಜಾನುವಾರುಗಳನ್ನು ಬಿಡುತ್ತಿದ್ದಾರೆ. ಕೃಷಿಕರು, ಕೂಲಿಕಾರರು ಮತ್ತು ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ನದಿ ತೀರದಲ್ಲಿ ಎಚ್ಚರಿಕೆ ಲಕ ಹಾಕಬೇಕು. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.