ಕುಕನೂರಿನ ಇಟಗಿ ಭೀಮಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕದಿಂದ ಸಾಹಿತ್ಯ ಚಟುವಟಿಕೆಗಳ ಕುರಿತ ಪೂರ್ವಭಾವಿ ಸಭೆ ನಡೆಯಿತು. ಕಸಾಪ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಣ್ಣ ಹಿರೇಮನಿ, ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ, ಪ್ರಮುಖರಾದ ಈಶಪ್ಪ ಮಳಿಗಿ, ಶರಣಪ್ಪ ಕೊಪ್ಪದ, ಬಸವರಾಜ ಬಿನ್ನಾಳ, ಬಸವರಾಜ ಉಪ್ಪಿನ, ಪೀರ್‌ಸಾಬ್ ದಫೇದರ್ ಇತರರಿದ್ದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಕನ್ನಡ ರಕ್ಷಿಸಿ
ಕುಕನೂರು: ಪ್ರತಿಯೊಬ್ಬರೂ ಕನ್ನಡ ಸ್ವಾಭಿಮಾನಕ್ಕಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಣ್ಣ ಹಿರೇಮನಿ ಹೇಳಿದರು.
ಪಟ್ಟಣದ ಇಟಗಿ ಭೀಮಾಂಬಿಕಾ ದೇವಸ್ಥಾನ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಹಿತ್ಯ ಚಟುವಟಿಕೆಗಳ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಕನ್ನಡ ಸಾಹಿತ್ಯ ಸಂಸ್ಕೃತಿ ಉಳಿವಿಗಾಗಿ ಕಾರ್ಯಕ್ರಮ ನಡೆಸಲಾಗುವುದು. ತಾಲೂಕು ಸಮ್ಮೇಳನ ಆಯೋಜಿಸುವ ಅಗತ್ಯವಿದೆ. ಕನ್ನಡಿಗರು ಅನ್ಯಭಾಷೆ, ಸಂಸ್ಕೃತಿ ವ್ಯಾಮೋಹವನ್ನು ಬಿಟ್ಟು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಕನ್ನಡ ರಕ್ಷಣೆ ಮಾಡಬೇಕು ಎಂದರು.
ಕಸಪ ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ, ಪ್ರಮುಖರಾದ ಈಶಪ್ಪ ಮಳಿಗಿ, ಶರಣಪ್ಪ ಕೊಪ್ಪದ, ಬಸವರಾಜ ಬಿನ್ನಾಳ, ಬಸವರಾಜ ಉಪ್ಪಿನ, ಪೀರ್ ಸಾಬ್ ದಪೇದರ್, ಬಸವರಾಜ ಮೇಟಿ, ಭೀಮ್ ರೆಡ್ಡಿ ಶಾಡ್ಲಿಗೇರಿ, ಈರಣ್ಣ ಕೋನಾರಿ, ಉಮೇಶ್ ಕಂಬಳಿ, ಅಶೋಕ ಮಾದಿನೂರು, ಮೇಘರಾಜ್ ಜಡಗಿ, ರವಿಕುಮಾರ ಇತರರಿದ್ದರು.