ಯಲಬುರ್ಗಾ ತಾಲೂಕಿನ ಗೆದಗೇರಿಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಗೋಸಾವಿ, ಆರ್‌ಎಸ್‌ಪಿಆರ್ ನವೀನ ನಾಯ್ಕರ್‌ಜೀ, ಪೊಲೀಸ್ ಇಲಾಖೆಯ ಕಳಕಮ್ಮ, ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾಶ್ರೀ, ರಜಿಯಾ, ಮುಖ್ಯಶಿಕ್ಷಕರಾದ ರುದ್ರಗೌಡ ಗೋಣಿ, ಶಿವಾನಂದ ಅಂಗಡಿ, ಹನುಮಪ್ಪ ಬಸರಿಗಿಡದ, ಶರಣಪ್ಪ ಅಂಗಡಿ ಇತರರಿದ್ದರು. 
ಕೊಪ್ಪಳ

ಕಲಿಕಾ ಪೂರಕ ವಾತಾವರಣ ನಿರ್ಮಿಸಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಬ್ಬ
  • ಪಾಲಕರು
  • ಮಕ್ಕಳಿಗೆ
ಯಲಬುರ್ಗಾ: ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ ಹೇಳಿದರು.
ತಾಲೂಕಿನ ಗೆದಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗ್ರಾಪಂನಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಈ ದೇಶದ ಸಂಪತ್ತು. ಮಕ್ಕಳಿಗೆ ಹಕ್ಕುಗಳನ್ನು ನೀಡುವ ಮೂಲಕ ಅವರ ಭವಿಷ್ಯ ರೂಪಿಸಬೇಕಾಗಿದೆ.
ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಪ್ರಯತ್ನಿಸಬೇಕು. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಪೂರಕ ವಾತಾವರಣ ನಿರ್ಮಿಸಲು ಶ್ರಮಿಸಲಾಗುವುದು. ಕುಂದು ಕೊರತೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪಿಡಿಒ ದೊಡ್ಡಪ್ಪ ನಾಯ್ಕ, ಪ್ರೌಢಶಾಲೆ ಮುಖ್ಯಶಿಕ್ಷಕ ನಾಗಭೂಷಣ ಚಿನಿವಾಲರ ಮಾತನಾಡಿದರು. ವಿಸ್ತಾರ ಸಂಸ್ಥೆಯ ಶೋಭಾ, ಪಕೀರಪ್ಪ ನಡುವಿನಮನಿ, ತಿರುಪತಿ ಬಸರಿಗಿಡದ, ಮಂಜುನಾಥ ಕೊರಡಕೇರಿ, ಕಳಕಯ್ಯ ಹಿರೇಮಠ ಇತರರಿದ್ದರು.