ವಿಜಯವಾಣಿ ಸುದ್ದಿಜಾಲ ಗಂಗಾವತಿ
ತಾಲೂಕಿನ ಆನೆಗೊಂದಿ, ಸಣಾಪುರ ಭಾಗದ ತುಂಗಭದ್ರಾ ನದಿ ತೀರದಲ್ಲಿ ಅಪಾಯಕಾರಿ ಜಂಪಿಂಗ್ ಮತ್ತು ಕೋರೇಕಲ್ ಬೋಟ್ ರೈಡಿಂಗ್ (ನಾಡದೋಣಿ ಬಳಸಿ ಪರ್ಯಟನೆ)ಅವ್ಯಾಹತವಾಗಿ ನಡೆಯುತ್ತಿದ್ದು, ಪ್ರವಾಸಿಗರ ಜೀವದೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ.
ಹಂಪಿಯಷ್ಟೇ ಪ್ರಸಿದ್ಧಿ ಪಡೆದಿರುವ ಆನೆಗೊಂದಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಬರುತ್ತಾರೆ. ಆದರೆ, ಆನೆಗೊಂದಿಯ ತಳವಾರ ಘಟ್ಟ, ನವವೃಂದಾವನಗಡ್ಡಿ, ಸಣಾಪುರದ ಾಲ್ಸ್ ಬಳಿ ನಾಡದೋಣಿ ಬಳಸಿ ಕೋರೇಕಲ್ ಬೋಟ್ ರೈಡಿಂಗ್‌ಗೆ ಸ್ಥಳೀಯ ಹಾಗೂ ಹಂಪಿ ಭಾಗದ ಯುವಕರು ಆದ್ಯತೆ ನೀಡುತ್ತಿದ್ದಾರೆ. ಪ್ರವಾಸಿಗರನ್ನು ಅಪಾಯಕಾರಿ ಸ್ಥಳಗಳಾದ ತಳವಾರ ಘಟ್ಟ, ವಿಜಯವಿಠ್ಠಲ ದೇವಾಲಯ, ಕೋದಂಡರಾಮ, ಸಣಾಪುರ ಾಲ್ಸ್ ಹಾಗೂ ಜಲಾಶಯದ ಕೆಳಭಾಗದಲ್ಲಿ ಬಹುದೂರು ಕರೆದೊಯ್ಯುತ್ತಿದ್ದಾರೆ. ಸಣಾಪುರ ಜಲಾಶಯದ ಮೇಲ್ಭಾಗದ ಕಲ್ಲು ಬಂಡೆಗಳಿಂದ ಜಂಪ್ ಮಾಡುವುದು ಇತ್ತೀಚೆಗೆ ಹೊಸ ್ಯಾಶನ್ ಆಗಿದೆ. ಲ್ೈ ಜಾಕೆಟ್ ಬಳಸಿ ಜಿಗಿಯುವ ಪ್ರವಾಸಿಗರಿಗೆ ಇಲ್ಲಿನ ಆಳ ಮತ್ತು ಕಲ್ಲುಬಂಡೆಗಳ ಮಾಹಿತಿಯಿಲ್ಲ. ಹೀಗಾಗಿ ಜೀವಕ್ಕೆ ಕುತ್ತು ಉಂಟಾಗುವ ಸಾಧ್ಯತೆಗಳು ಹೆಚ್ಚು.
ಮೋಜು-ಮಸ್ತಿ ನೆಪದಲ್ಲಿ ವೀಕೆಂಡ್ ಕಳೆಯಲು ರೆಸಾರ್ಟ್‌ಗೆ ಬರುವ ಹೊರ ರಾಜ್ಯಗಳ ಪ್ರವಾಸಿಗರನ್ನು ಜಂಪಿಂಗ್ ಇವೆಂಟ್ ಮತ್ತು ಕೋರೇಕಲ್ ಡ್ರೈವಿಂಗ್ ಆನ್‌ಲೈನ್ ಮೂಲಕವೇ ಬುಕ್ ಮಾಡುತ್ತಾರೆ. ಪ್ರತಿಯೊಬ್ಬರಿಂದ 500 ರೂ.ಯಿಂದ 800 ರೂ.ವರೆಗೂ ವಸೂಲಿ ಮಾಡಲಾಗುತ್ತಿದೆ. ಹರಿಗೋಲು ಬಳಕೆ ನಿಷೇಧವಿದ್ದರೂ, ನಾಡದೋಣಿ ೆಟ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತಿದ್ದರೂ ಕೇಳುವರಿಲ್ಲ. ಹಂಪಿ, ಕಮಲಾಪುರ, ಹೊಸಪೇಟೆ, ಬಸಾಪುರ ಮತ್ತು ಆನೆಗೊಂದಿ ಭಾಗದ 30ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಪ್ರಚಲಿತದಲ್ಲಿವೆ. ಅಪಾಯಕಾರಿ ಜಂಪಿಂಗ್ ಇವೆಂಟ್‌ಗಳನ್ನು ಹೆಚ್ಚು ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಹಲವರು ಪ್ರಾಣ ಕಳೆದುಕೊಂಡರೂ ರೆಸಾರ್ಟ್‌ಗಳು ಎಚ್ಚರವಾಗಿಲ್ಲ. ಕಳೆದ ಮೂರು ವರ್ಷಗಳಲ್ಲಿ ವಿವಿಧ ರಾಜ್ಯದ ಮೂವರು ಪ್ರಾಣ ಕಳೆದುಕೊಂಡಿದ್ದು, ಕೋರೇಕಲ್ ಡ್ರೈವ್‌ನ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
ತುಂಗಭದ್ರಾ ನದಿ ತೀರ ನೀರು ನಾಯಿ (ಓಟ್ಟರ್) ಸಂರಕ್ಷಿತ ಪ್ರದೇಶವಾಗಿದ್ದು, 30ಕ್ಕೂ ಹೆಚ್ಚು ಜಾತಿ ಮೀನುಗಳಿವೆ. ಮೊಸಳೆ, ಕೊಕ್ಕರೆ, ಬಾತುಕೋಳಿಗಳು ಮತ್ತು ವಲಸೆ ಪಕ್ಷಿಗಳ ವಾಸಸ್ಥಾನವಾಗಿದ್ದರೂ, ಅಪಾಯಕಾರಿ ಬೋಟಿಂಗ್‌ನಿಂದ ಜಲಚರಗಳಿಗೆ ಸಂಕಷ್ಟ ಎದುರಾಗಿದೆ. ಡಿಸೆಂಬರ್‌ನಲ್ಲಿ ನದಿ ತೀರದ ಬೆಟ್ಟದ ಪ್ರದೇಶ ಚಿರತೆಗಳಿಗೆ ಸಂತಾನೋತ್ಪತಿ ಸ್ಥಳವಾಗಿವೆ. ಅಪಾಯಕಾರಿ ಬೋಟಿಂಗ್‌ನಿಂದ ಪ್ರಾಣಿಗಳ ಸಂಘರ್ಷ ಎದುರಾಗುತ್ತಿದ್ದು, ವಿಹಾರಕ್ಕೆ ಬರುವ ಪ್ರಾಣಿ, ಪಕ್ಷಿ ಮತ್ತು ಜಲಚರಗಳು ಜಾಗ ಬದಲಿಸುತ್ತಿವೆ. ಪ್ರವಾಸಿಗರಿಗೆ ಸ್ವೇಚ್ಛಚಾರವಾದರೆ, ಪ್ರಾಣಿ-ಪಕ್ಷಿಗಳಿಗೆ ಪ್ರಾಣ ಸಂಕಟ. ಅತಿ ಹೆಚ್ಚು ಹರಿಗೋಲು ನಿಷೇಧ ಪ್ರಕರಣ ಸಣಾಪುರ ಭಾಗದಲ್ಲಿ ದಾಖಲಾದರೂ ದಂಡಕ್ಕೆ ಸೀಮಿತವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ನಿಷೇಧಿತ ಪ್ರದೇಶದಲ್ಲಿ ನಾಡದೋಣಿ ಬಳಕೆ ಕಾನೂನುಬಾಹಿರ. ಇದಕ್ಕೆ ಪ್ರಚೋದಿಸುವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪ್ರವಾಸಿಗರು ಮತ್ತು ಸಾರ್ವಜನಿಕರ ಸುರಕ್ಷತೆ ಮುಖ್ಯವಾಗಿದ್ದು, ಕಾನೂನು ವ್ಯಾಪ್ತಿಯಲ್ಲಿ ಯಾಂತ್ರಿಕ ದೋಣಿ ಬಳಸಲು ಅವಕಾಶವಿದೆ. ಜೆ.ಎಸ್.ನ್ಯಾಮಗೌಡರ್ ಡಿವೈಎಸ್ಪಿ
ತುಂಗಭದ್ರಾ ನದಿ ತೀರದಲ್ಲಿ ಅಪಾಯಕಾರಿ ಕೋರೇಕಲ್ ಬೋಟ್ ಡ್ರೈವಿಂಗ್ ಬಗ್ಗೆ ಸಂಬಂಧಪಟ್ಟ ಇಲಾಖೆ ನಿಗಾವಹಿಸಬೇಕು. ಪರವಾನಗಿ ಪಡೆದ ಯಾಂತ್ರಿಕ ದೋಣಿ ಮತ್ತು ಮೀನುಗಾರರಿಗೂ ನಾಡದೋಣಿ ಬಳಕೆಯಿಂದ ತೊಂದರೆಯಾಗುತ್ತಿದೆ. ಎನ್.ಪದ್ಮನಾಭರಾಜು ಸ್ಥಳೀಯ