ಕನಕಗಿರಿಯ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ.ಶ್ರೀನಿವಾಸ ಪದಕಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ವೆಂಕಟೇಶ್ ಕುಲಕರ್ಣಿ, ಪ್ರಮುಖರಾದ ಕೆ.ಎಚ್.ಕುಲಕರ್ಣಿ, ಗುರುರಾಜ ಕುಲಕರ್ಣಿ ಕನ್ನೇರಡುವು, ಬಿ.ವಿಜೋಷಿ ಇತರರಿದ್ದರು.
ರಾಘವೇಂದ್ರ ಮಠದ ಅಭಿವೃದ್ಧಿಗೆ ಸಹಕಾರ
ಕನಕಗಿರಿ: ಪಟ್ಟಣದ ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿಗೆ ನೆರವು ನೀಡುವುದಾಗಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ನಗರದ ಶ್ರೀ ಕನಕಾಚಲಪತಿ ಬ್ರಹ್ಮೋತ್ಸವ ಹಾಗೂ 16ನೇ ವರ್ಷದ ಜ್ಞಾನಸತ್ರ ಕಾರ್ಯಕ್ರಮದ ನಿಮಿತ್ತ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀಗುರುಶ್ರೀಶ ವಿಠ್ಠಲ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಮಠದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಮಠದ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು. ವಿವಿಧ ಸೌಲಭ್ಯ ಒದಗಿಸುವಂತೆ ಪ್ರತಿಷ್ಠಾನದಿಂದ ಸಚಿವ ತಂಗಡಗಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಶ್ರೀನಿವಾಸ ಪದಕಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ವೆಂಕಟೇಶ್ ಕುಲಕರ್ಣಿ, ಪ್ರಮುಖರಾದ ಕೆ.ಎಚ್.ಕುಲಕರ್ಣಿ, ಗುರುರಾಜ ಕುಲಕರ್ಣಿ ಕನ್ನೇರಡುವು, ಟಿ.ಗುರುರಾಜ ಕುಲಕರ್ಣಿ, ಬಿ.ವಿ.ಜೋಷಿ, ಪ್ರಹ್ಲಾದಾಚಾರ್ಯ ಕಳ್ಳಿ, ಎಂ.ಭೀಮರಾವ್, ಕೆ.ಎನ್.ನಾಗರಾಜ, ಟಿ.ರಾಘವೇಂದ್ರ, ಗೋಪಾಲ ಕೃಷ್ಣ ಕುಲಕರ್ಣಿ ರಾಜ ಪುರೋಹಿತ ಇತರರಿದ್ದರು.