ಶ್ರೀರಾಮನಗರ ಪಿಡಿಒ ನಾಗೇಶ ಕುರ್ಡಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಪ್ರಮುಖರಾದ ರಾಮಕೃಷ್ಣ, ಕೆ.ನಾಗೇಶ್ವರರಾವ್, ಮಂಜುನಾಥ, ಪಿ.ಮುರಳಿ ಇತರರಿದ್ದರು.
ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ
ಗಂಗಾವತಿ: ತಾಲೂಕಿನ ಶ್ರೀರಾಮನಗರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸಲು ಒತ್ತಾಯಿಸಿ ಗ್ರಾಮಸ್ಥರು ಗ್ರಾಪಂ ಕಚೇರಿಯಲ್ಲಿ ಪಿಡಿಒ ನಾಗೇಶ ಕುರ್ಡಿಗೆ ಶನಿವಾರ ಮನವಿ ಸಲ್ಲಿಸಿದರು.
ರಸ್ತೆ ಬದಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಪಾದಚಾರಿಗಳು, ಬೈಕ್ ಸವಾರರ ಮೇಲೆ ಏಕಾಏಕಿ ದಾಳಿಮಾಡುತ್ತಿವೆ. ಒಂಟಿಯಾಗಿ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಗ್ರಾಮದ 6ನೇ ವಾರ್ಡ್‌ನಲ್ಲಿ ಯುವಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಗಂಭೀರ ಗಾಯವಾಗಿದೆ. ಕೂಡಲೇ ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಪಿಡಿಒ ನಾಗೇಶ ಕುರ್ಡಿ ಮಾತನಾಡಿ, ಬೀದಿ ನಾಯಿಗಳ ಕುರಿತು ಈಗಾಗಲೇ ಗ್ರಾಮಸಭೆಯಲ್ಲಿ ಚರ್ಚಿಸಿದ್ದು, ಮೇಲಧಿಕಾರಿಗಳ ಗಮನಕ್ಕೆ ತಂದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಮುಖರಾದ ರಾಮಕೃಷ್ಣ, ಕೆ.ನಾಗೇಶ್ವರರಾವ್, ಮಂಜುನಾಥ, ಪಿ.ಮುರಳಿ, ಎ.ಮಾರ್ಕಂಡೇಯಲು, ಡಿ.ಸೂರ್ಯನಾರಾಯಣ, ಡಿ.ಸುಬ್ರಮಣ್ಯ, ಚಿರಂಜೀವಿ ಇತರರಿದ್ದರು.