ಕನಕಗಿರಿ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಗಾಳಿ, ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ., ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಇತರರಿದ್ದರು. 
ಕೊಪ್ಪಳ

ವಚನ ಕ್ರಾಂತಿಗೆ ಕೊಡುಗೆ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಕ್ರಾಂತಿಯಲ್ಲಿ
  • ಕೊಡುಗೆ
  • ಜಯಂತಿ
ಕನಕಗಿರಿ: ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಅತ್ಯಾಪ್ತರಾಗಿದ್ದರಲ್ಲದೇ, ಅವರ ಕಾರ್ಯದರ್ಶಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸಿದರು ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.
ತಹಸಿಲ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿಯಲ್ಲಿ ಮಾತನಾಡಿದರು.
ಬಸವಣ್ಣನವರು ತಮ್ಮನ್ನು ಭೇಟಿ ಮಾಡಲು ಬರುವವರಿಗೆ ಮೊದಲಿಗೆ ಹಡಪದ ಅಪ್ಪಣ್ಣನವರನ್ನು ಭೇಟಿ ಮಾಡಿ ಬರುವಂತೆ ಸೂಚಿಸುತ್ತಿದ್ದರು. ಅಂಥ ಆತ್ಮೀಯತೆಯನ್ನು ಹಡಪದ ಅಪ್ಪಣ್ಣನವರೊಂದಿಗೆ ಬಸವಣ್ಣನವರು ಹೊಂದಿದ್ದರು. ಹಡಪದ ಅಪ್ಪಣ್ಣನವರಂತೆ ಅವರ ಪತ್ನಿಯು ಬಸವಣ್ಣನವರ ಅನುಯಾಯಿಗಾಗಿದ್ದರು. ವಚನ ಕ್ರಾಂತಿಯಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ., ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಸಮಾಜದ ತಾಲೂಕು ಅಧ್ಯಕ್ಷ ದೊಡ್ಡಬಸವ ಹಿರೇಖೇಡ, ಪ್ರಮುಖರಾದ ಚಂದ್ರು ಮುಸಲಾಪುರ, ವಿಜಯ, ಹನುಮೇಶ, ಬಸವರಾಜ, ಮಲ್ಲಿಕಾರ್ಜುನ, ಉಮೇಶ, ಮರಿಸ್ವಾಮಿ, ಯಮನೂರಪ್ಪ, ಸಿದ್ದು, ಹನುಮೇಶ ಹುಲಿಹೈದರ, ಶಿರಸ್ತೇದಾರ್‌ರಾದ ಅನಿತಾ ಇಂಡಿ, ಶರಣಪ್ಪ, ಸಿಬ್ಬಂದಿ ಶರಣಪ್ಪ ಚಳಗೇರಿ, ಅಮರ್ ತೆಗ್ಗಿನಮನಿ, ಶರಣಪ್ಪ ಇತರರಿದ್ದರು.