ಕವಲೂರು ಸಹಿಪ್ರಾ ಶಾಲೆಯಲ್ಲಿ ಸಂಜೀವಿನಿ ಸಂಘದಿಂದ ಮೊಟ್ಟೆಗಳನ್ನು ಪೂರೈಸಲಾಯಿತು. ಮುಖ್ಯಶಿಕ್ಷಕಿ ಯಶೋದಾ, ಒಕ್ಕೂಟದ ಅಧ್ಯಕ್ಷೆ ರೇಣುಕಾ ಜೋಗಿನ, ಸದಸ್ಯರಾದ ದ್ಯಾಮವ್ವ, ಶೋಭಾ, ಕೃಷಿ ಸಖಿ ಶಿಲ್ಪಾ, ಪಶು ಸಖಿ ನೇತ್ರಾ ಇತರರಿದ್ದರು. 
ಕೊಪ್ಪಳ

ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಶಾಲೆಗೆ ಮೊಟ್ಟೆ ಪೂರೈಕೆ
  • ಸರ್ಕಾರಿ ಶಾಲೆಗೆ ಸಹಕಾರಿ
ಕವಲೂರು: ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಎನ್.ಅರ್.ಎಲ್.ಎಂ ಯೋಜನೆಯಡಿ ಶ್ರೀ ಕಲ್ಪವೃಕ್ಷ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರು ರಿವಾರ್ಡ್ ಜಲಾನಯನ ಯೋಜನೆಯ ಸಹಾಯಧನ ಮತ್ತು ಒಕ್ಕೂಟದ ಸಿಐಎಫ್ ಸಾಲದಿಂದ ಕೋಳಿ ಸಾಕಾಣಿಕೆ ಆರಂಭಿಸಿದ್ದು, ಸ್ಥಳೀಯ ಸಹಿಪ್ರಾ ಶಾಲೆಗೆ ಮೊಟ್ಟೆ ಪೂರೈಕೆಗೆ ಬುಧವಾರ ಚಾಲನೆ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷೆ ರೇಣುಕಾ ಜೋಗಿನ ಮಾತನಾಡಿ, ಗುಣಮಟ್ಟದ ಮೊಟ್ಟೆಗಳನ್ನು ನಿಗದಿತ ಸಮಯಕ್ಕೆ ಸಂಘದ ಮಹಿಳೆಯರೇ ಪೂರೈಸುತ್ತಾರೆ. ಇದರಿಂದ ಸರ್ಕಾರಿ ಶಾಲೆಗೆ ಹಾಗೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸಹಕಾರಿಯಾಗಿದೆ ಎಂದರು.
ಸಂಘದ ಸದಸ್ಯರಾದ ದ್ಯಾಮವ್ವ ಯಂಕಪ್ಪ ಹಳ್ಳಿ, ಶೋಭಾ, ಮುದಿಯಮ್ಮ, ಕೃಷಿ ಸಖಿ ಶಿಲ್ಪಾ, ಪಶು ಸಖಿ ನೇತ್ರಾ, ಮುಖ್ಯಶಿಕ್ಷಕಿ ಯಶೋದಾ, ಶಿಕ್ಷಕರಾದ ಸುಮಿತ್ರಾ, ಮಹಾಲಿಂಗಪ್ಪ, ಹನುಮಪ್ಪ, ಜಂಬಣ್ಣ, ಸಾವಿತ್ರಿ, ಗಣೇಶ, ಮಲ್ಲಮ್ಮ ಇತರರಿದ್ದರು.