ಕವಲೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಲಾಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ, ಎಸ್.ಬಿ.ಎಸ್. ಆಯುರ್ವೇದ ಕಾಲೇಜು ಕಾರ್ಯದರ್ಶಿ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಪ್ರಮುಖರಾದ ಅನ್ವರ್, ಹೋನಕೆರಪ್ಪ, ತಿಮ್ಮಣ್ಣ, ಹನುಮಂತ, ಅನಿತಾ ಇತರರಿದ್ದರು.
ಉಚಿತ ಆರೋಗ್ಯ ಶಿಬಿರಗಳು ವಿವಿಧ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಹಕಾರಿಯಾಗುತ್ತವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ ಹಿರೇಗೌಡ್ರು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸರ್ಕಾರಿ ಇಲಾಖೆಗಳು ಹಾಗೂ ಸೇವಾ ಸಂಸ್ಥೆಗಳು ಜಂಟಿಯಾಗಿ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ ಎಂದರು.
ಶ್ರೀ ಎಸ್.ಬಿ.ಎಸ್. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ. ಸಿದ್ದಲಿಂಗಸ್ವಾಮಿ ಇನಾಮದಾರ್ ಮಾತನಾಡಿ, ಆಯುರ್ವೇದ ಪದ್ಧತಿಯು ಆರೋಗ್ಯ ರಕ್ಷಣೆಗೆ ಹಾಗೂ ರೋಗ ನಿವಾರಣೆಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದೆ. ಗ್ರಾಮೀಣ ಜನರು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ಶಿಬಿರದಲ್ಲಿ ನೇತ್ರ ತಪಾಸಣೆ, ಆಯುರ್ವೇದ ಚಿಕಿತ್ಸಾ ಸಲಹೆ, ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ಸೇವೆ ಒದಗಿಸಲಾಯಿತು. ಪಿಎಸಿಎಸ್ ಅಧ್ಯಕ್ಷ ಹೋನಕೆರಪ್ಪ ಮುಕ್ಕಣ್ಣವರ, ಪಿಡಿಒ ಅನಿತಾ, ಪ್ರಮುಖರಾದ ತಿಮ್ಮಣ್ಣ ಸಿದ್ನೇಕೊಪ್ಪ, ಹನುಮಂತ, ಅನ್ವರ್ ಗಡಾದ, ಅಂಬರೀಶ, ಚಂದ್ರಶೇಖರ, ವಿಜಯಲಕ್ಷ್ಮೀ, ಅಪ್ಪಣ್ಣ, ದತ್ತಾತ್ರೇಯ, ಡಾ. ಶರಣಪ್ಪ, ಕವಿತಾ, ಹನುಮಂತ ಹೊಸಮನಿ, ಡಾ. ಶಿಲ್ಪಾ, ಅಶೋಕ ಬಂಡಿ, ಹಿರೇಮಠ, ಸೋಮಪ್ಪ, ಕವಿತಾ, ಸವಿತಾ, ಹನುಮಂತ, ಶರಣಪ್ಪ ಇತರರು ಇದ್ದರು.