ಗಂಗಾವತಿ ಸರಸ್ವತಿಗಿರಿ ಎಸ್‌ವಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಬಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನವನ್ನು ಸಂಪನ್ಮೂಲ ವ್ಯಕ್ತಿ ಎ.ಕೆ.ಮಹೇಶಕುಮಾರ ಮಂಗಳವಾರ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಶಾಂತಾನಾಯ್ಕ, ಉಪ ಪ್ರಾಚಾರ್ಯ ಸೋಮಶೇಖರ್ ಇತರರಿದ್ದರು. 
ಕೊಪ್ಪಳ

ಗುರಿ ಸಾಧನೆಗೆ ನಿರಂತರ ಅಧ್ಯಯನ ಅಗತ್ಯ

ಗಂಗಾವತಿ: ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಬೇಕಿದ್ದು, ನಿರೀಕ್ಷಿತ ಗುರಿ ಸಾಧಿಸಲು ನಿರಂತರ ಅಧ್ಯಯನದಲ್ಲಿ ಏಕಾಗ್ರತೆ ರೂಢಿಸಿಕೊಳ್ಳಬೇಕಿದೆ ಎಂದು ಎಸ್ ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ಸಂಪನ್ಮೂಲ ವ್ಯಕ್ತಿ ಎ.ಕೆ. ಮಹೇಶಕುಮಾರ ತಿಳಿಸಿದರು.
ನಗರದ ಸರಸ್ವತಿಗಿರಿಯ ಗಂಗಾವತಿ ಎಜುಕೇಷನ್ ಟ್ರಸ್ಟ್‌ನ ಎಸ್‌ವಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಸ್ವಾಸ್ಥ್ಯ ಸಂಕಲ್ಪ ಯೋಜನೆಯಡಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಿದ್ದು, ದುಶ್ಟಚಗಳಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೈ ಜೋಡಿಸಬೇಕು. ಅತಿ ಹೆಚ್ಚು ಅಧ್ಯಯನಕ್ಕೆ ಸಮಯ ಮೀಸಲಿಟ್ಟರೆ ಭವಿಷ್ಯತ್ವದಲ್ಲಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂದರು.
ತಾಲೂಕು ಯೋಜನಾಧಿಕಾರಿ ಶಾಂತಾನಾಯ್ಕ ಮಾತನಾಡಿ, ಟ್ರಸ್ಟ್‌ನಿಂದ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದೆ. ಅಂತರ್ಜಲ ಹೆಚ್ಚಳ ಪೂರಕ ಯೋಜನೆಗಳು ಜಾರಿಯಲ್ಲಿವೆ ಎಂದರು. ಅಭಿಯಾನದಲ್ಲಿ ಆರೋಗ್ಯ, ಯೋಗ ಮತ್ತು ಶಿಕ್ಷಣ ಕುರಿತು ಮಾಹಿತಿ ನೀಡಲಾಯಿತು. ಗಂಗಾವತಿ ಸಿಟಿ ವಲಯದ ಸಾಯಿನಗರ ಕಾರ್ಯಕ್ಷೇತ್ರದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಉಪಪ್ರಾಚಾರ್ಯ ಸೋಮಶೇಖರ, ಟ್ರಸ್ಟ್ ವಲಯ ಮೇಲ್ವಿಚಾರಕ ಬಿ.ನೀಲರಾಜ, ಸೇವಾ ಪ್ರತಿನಿಧಿ ಮಂಜುಳಾ ಹಾಗೂ ವಿದ್ಯಾರ್ಥಿಗಳಿದ್ದರು.